ಇಂಜಿನಿಯರಿಂಗ್ (ENGINEERING) ವಿದ್ಯಾರ್ಥಿಗಳಿಗೆ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ಶಾಕ್ ನೀಡಿದೆ. ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ಈ ವರ್ಷ ಸೇರುವ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಫೀಸ್ ಹೆಚ್ಚಿಸಲು (FEES HIKE) ನಿರ್ಧಾರ ಮಾಡಲಾಗಿದೆ. 45% ಲೋವರ್ ಫೀಸ್, 30% ಹೈಯರ್ ಫೀಸ್ 25% ಮ್ಯಾನೇಜ್ಮೆಂಟ್ ಸೀಟ್ ಗೆ ಹೋಗಲಿದೆ ಎಂದು ಹೇಳಿದರು.
ಎಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಂದ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ದಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈವರೆಗೂ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟುಗಳಿಗೆ ಕಾಮೆಡ್ ಕೆ (COMED –K) ಪರೀಕ್ಷೆ ನಡೆಯುತ್ತಿತ್ತು. ಇದೀಗ ಸಿಇಟಿ ಮತ್ತು ಕಾಮೆಡ್ ಕೆ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕು ಅಂತ ಚರ್ಚೆ ಮಾಡಿದ್ದೇವೆ. ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪ್ರತ್ಯೇಕ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ. ಕಾಮೆಡ್-ಕೆ, ಸಿಇಟಿ ಒಟ್ಟಿಗೆ ಏಕರೂಪದ ಸಿಇಟಿ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಒಡಂಬಡಿಕೆ ಆಗಲಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : – ಫೇಸ್ ಬುಕ್ – ಇನ್ ಸ್ಟಾಗ್ರಾಮ್ ಗಳಲ್ಲಿ ಹಣ ಸಂಪಾದಿಸಿ – ಜುಕರ್ ಬರ್ಗ್
ಕೊರೊನಾ ಹಿನ್ನಲೆ ಎರಡು ವರ್ಷಗಳ ಕಾಲ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳು ಬೇಡಿಕೆ ಇಟ್ಟಿದ್ದರು. 20-25% ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ರು. ನಾವು 10% ಶುಲ್ಕ ಹೆಚ್ವಳಕ್ಕೆ ಅನುಮತಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ : – VIRAT KOHLI – ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್