ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆ ರಾಕಿಭಾಯ್ ಸಿನಿಮಾ ಮಾಡಿದೆ. ಬರೋಬ್ಬರಿ ಒಂದು ಸಾವಿರ ಕೋಟಿ ಕಲೆಕ್ಷನ್ ಮಾಡೋ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ.
ಕೆಜಿಎಫ್ (KGF-2) ಸಿನಿಮಾ ರಿಲೀಸ್ ಆಗಿ 2 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ ಬಾಕ್ಸ್ಆಫೀಸ್ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ ಕೆಜಿಎಫ್ 2′ ಸಿನಿಮಾ ಮಾಡಿದೆ. ಇದೀಗ ಬಾಕ್ಸ್ಆಫೀಸ್ನಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ.
ಇದನ್ನೂ ಓದಿ :- KGF ಆರ್ಭಟಕ್ಕೆ ಹಿಂದಿಯ ಹಳೆಯ ದಾಖಲೆಗಳೆಲ್ಲ ಧೂಳಿಪಟ- ಒಟ್ಟು 720 ಕೋಟಿ ರೂ. ಕಲೆಕ್ಷನ್!
ಕೆಜಿಎಫ್ 2′ ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಅಂತಾ ನೋಡೋದಾದ್ರೆ, ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ.
ಪ್ರಸ್ತುತ ಹಿಂದಿ ಬಾಕ್ಸ್ಆಪೀಸ್ನಲ್ಲಿ 353.06 ಕೋಟಿ ಬಾಚಿದೆ.ಈ ಮೂಲಕ ಬಾಕ್ಸ್ಆಫೀಸ್ ನರಾಚಿ ಅಧಿಪತಿಯ ಸುಂಟರಗಾಳಿ ಓಟ ಮುಂದುವರೆದಿದೆ.
ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು