ಗುಜರಾತ್ ಗಲಭೆ ಪ್ರಕರಣದ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಯಾವುದೇ ನಾಟಕ ಮಾಡಿಲ್ಲ. 2002ರ ಗುಜರಾತ್ ಗಲಭೆಗೆ (Gujarat Riots) ಸಂಬಂಧಿಸಿದ ಸುಳ್ಳು ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ 19 ವರ್ಷಗಳಿಂದ ಮೌನವಾಗಿ ಸಹಿಸಿಕೊಂಡಿದ್ದಾರೆ. ಅವರು ಒಳಗೊಳಗೇ ಈ ಬಗ್ಗೆ ಕೊರಗುವುದನ್ನು ನಾನು ನೋಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಗುಜರಾತ್ ಗಲಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
19 ವರ್ಷಗಳ ಕಾಲ ಮೌನವಾಗಿ ಸುಳ್ಳು ಆರೋಪಗಳನ್ನು ಸಹಿಸಿಕೊಂಡರು. 2002ರ ಗಲಭೆಯಲ್ಲಿ ಮೋದಿ ವಿರುದ್ಧ ಸುಳ್ಳು ಆರೋಪ ಮಾಡಲಾಯಿತು. ಆದರೆ, ಶಿವನು ವಿಷ ಕುಡಿದಂತೆ ಮೌನವಾಗಿ ಮೋದಿ ಆರೋಪಗಳ ನೋವನ್ನು ನುಂಗಿಕೊಂಡರು. ಅವರ ವಿರುದ್ಧದ ಆರೋಪಗಳ ಬಗ್ಗೆ ಬಿಜೆಪಿಯಿಂದ ಯಾರೂ ಧರಣಿ ಮಾಡಲಿಲ್ಲ. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ವಿಚಾರಣೆಯ ಬಗ್ಗೆ ಕಾಂಗ್ರೆಸ್ ನಾಯಕರು ದಿನಗಟ್ಟಲೆ ಪ್ರತಿಭಟನೆ ನಡೆಸುತ್ತಿದ್ದಾರೆ”ಎಂದು ಅಮಿತ್ ಷಾ ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : – ಬಿಜೆಪಿ ಅಭಿವೃದ್ಧಿ ಮಾದರಿ ಎಂದರೆ ಇದೇನಾ? ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ – ಬಿಜೆಪಿ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿದ ಹೆಚ್.ಡಿ.ಕೆ