ಸಂತೋಷ್ ಪಾಟೀಲ್ (Santhosh patil) ಸೂಸೈಡ್ (suicide) ಪ್ರಕರಣ ಕುರಿತಂತೆ ಕಾಂಗ್ರೆಸ್ ನಾಯಕರು ಈಶ್ವರಪ್ಪ ಮೇಲೆ ಹರಿಹಾಯ್ದಿದ್ದಾರೆ. ಸಚಿವ ಈಶ್ವರಪ್ಪನನ್ನ ಮೊದಲು ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈಶ್ವರಪ್ಪ ವಿರುದ್ಧ ಎಫ್ ಐ ಆರ್ (FIR) ದಾಖಲಿಸಬೇಕು. ಈಶ್ವರಪ್ಪನನ್ನ(eshwarappa) ಮಂತ್ರಿಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಂತೋಷ್ ಸೂಸೈಡ್ ಡೆತ್ ನೋಟ್ ನಲ್ಲಿ ಈಶ್ವರಪ್ಪನೇ ಕಾರಣ ಅಂತಾ ಹೇಳಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದ್ರು. ಇದನ್ನುಓದಿ – ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಮೊದಲ ಬಲಿ ಆಗಿದೆ – ಸುರ್ಜೇವಾಲ
ಇದು ಕೊಲೆ ಎಂದ ಡಿಕೆಶಿ
ಸಂತೋಷ ಪಾಟೀಲ್ ಸಾವಿನ ಬಗ್ಗೆ ಸ್ಪೋಟಕ ಸುದ್ದಿ ಕೊಡ್ತಾ ಇದ್ದೀರಾ ಎಂದು ಮಾಧ್ಯಮದವರಿಗೆ ಡಿಕೆಶಿ (DKS) ಪ್ರಶ್ನಿಸಿದ್ದಾರೆ. ಎಲ್ಲರಿಗೂ ಈ ವಿಚಾರ ಗೊತ್ತಿದೆ. ಈಶ್ವರಪ್ಪ ಮೇಲೆ ಕೇಸ್ ಆಗಬೇಕು. ಸುಮ್ಮನೆ ತನಿಖೆ ಬೇಡ, ಈಶ್ವರಪ್ಪ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣ ಕೂಡ ದಾಖಲಿಸಬೇಕು. ೪೦% ಕಮಿಷನ್ ಸರ್ಕಾರ ಅಂತ ನಾನು ಹೇಳಿದ್ದು ಅಲ್ಲ. ಗುತ್ತಿಗೆದಾರರು ಹೇಳಿದ್ದು ಎಂದು ತಿಳಿಸಿದ್ರು. ಸಿಎಂ ಯಾರ ರಕ್ಷಣೆ ಮಾಡಬಾರದು. ಮೊದಲು ಬಂಧಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನುಓದಿ –ಈಶ್ವರಪ್ಪ ಹೆಸರು ಬರೆದಿಟ್ಟು ಉಡುಪಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ