ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್(Bengaluru mysuru express) ಕಾರಿಡಾರ್ 2022 ರ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಹೀಗಾಗಿ ಹಣ ಪಾವತಿ ಮಾಡಲು ಎಲ್ಲರೂ ಸಿದ್ಧರಾಗಿ.
ಬೆಂಗಳೂರು-ಮೈಸೂರು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಈಗಿರುವ ಮೂರು ಗಂಟೆಗಳಿಂದ 75 ನಿಮಿಷಗಳಿಗೆ ಇಳಿಸಲಾಗಿದೆ, ಅದಕ್ಕಾಗಿ ವಾಹನ ಚಾಲಕರು ಎರಡು ಸ್ಥಳಗಳಲ್ಲಿ 200 ರಿಂದ 250 ರೂ. ಗಳವರೆಗೆ ಟೋಲ್ (Toll) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ ಗೆ ಬೆಂಗಳೂರು ಸಮೀಪದ ಕುಂಬಳಗೋಡು (Kumbalagudu) ಬಳಿಯ ಕಣಮಿಣಿಕೆ ಹಾಗೂ ಶ್ರೀರಂಗಪಟ್ಟಣ ಸಮೀಪದ ಗಣಂಗೂರು ಬಳಿ ಮತ್ತೊಂದು ಟೋಲ್ ಗೇಟ್ ಇರಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾರ್ಗಸೂಚಿಗಳ ಪ್ರಕಾರ, ಪ್ರತಿ 60 ಕಿಮೀಗೆ ಟೋಲ್ ಇರಬೇಕು, ಸರಾಸರಿ ಶುಲ್ಕ ಪ್ರತಿ ಕಿಮೀಗೆ 1.5 ರಿಂದ 2 ರೂ ನಿಗದಿ ಪಡಿಸಲಾಗಿದೆ. ಟೋಲ್ ಶುಲ್ಕವು ರೂ 200 ರಿಂದ ರೂ 250 ರ ನಡುವೆ ಇರುತ್ತದೆ. ಆದರೆ 75 ನಿಮಿಷಗಳಲ್ಲಿ ಮೈಸೂರು ತಲುಪಬಹುದು ಜೊತೆಗೆ ಸಮಯ ಉಳಿಸಬಹುದು. ಇದನ್ನೂ ಓದಿ : – ಬೆಂಗಳೂರನ್ನ ಗ್ರೀನ್ ಸಿಟಿ ಮಾಡುವತ್ತ ಸರ್ಕಾರ ಹೆಜ್ಜೆ…