ಪಂಚಮಸಾಲಿ( PANCHAMASALI) ಸಮಾಜಕ್ಕೆ 2Aಮೀಸಲಾತಿ ನೀಡುವಂತೆ ಮತ್ತೆ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಡಿ.29 ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯವನ್ನು ತಿರಸ್ಕಾರ ಮಾಡಿದ್ದೇವೆ.
ಮತ್ತೆ ಸರ್ಕಾರಕ್ಕೆ ಗಡುವು ನೀಡ್ತಾ ಇದ್ದೇವೆ, ಜನವರಿ 12 ಒಳಗೆ ಅಧಿಸೂಚನೆ ಹೊರಡಿಸಿ. ಇಲ್ಲದಿದ್ದರೆ ಸಿಎಂ ಬೊಮ್ಮಾಯಿ ಅವರ ಊರಿನಿಂದ ಹೋರಾಟ ಮಾಡುತ್ತೇವೆ. ಪ್ರತಿ ವರ್ಷ ಕೂಡಲ ಸಂಗಮದಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡುತ್ತಿದ್ದೆವು. ಜನವರಿ 13 ರಂದು ಸುಖದ ಸಂಕ್ರಾಂತಿ ಅಲ್ಲ. ಸತ್ಯದ ಸಂಕ್ರಾಂತಿ ( SANKRRANTI )ಮಾಡೋಣ. ಈ ಬಾರಿ ಎಲ್ಲಾ ಸಮಾಜದ ಬಾಂಧವರು ಶಿಗ್ಗಾಂವಿಯಲ್ಲಿ ಹೋರಾಟ ಮಾಡುತ್ತೇವೆ. 2 ಎ ಮೀಸಲಾತಿ ಹಿಂದೆ ಕಾಣದ ಶಕ್ತಿಗಳ ಕೈವಾಡ ಇದೆ. ಅದನ್ನು ನೇರವಾಗಿ ಹೇಳಲು ಬರೋದಿಲ್ಲ. ಸಿಎಂ ಬೊಮ್ಮಾಯಿ ಅವರೇ ಮೀಸಲಾತಿ ನೀಡಬೇಕು. ಮುಂದೆ ಬರುವವರು ಯಾರಿಂದಲೂ ಮೀಸಲಾತಿ ಕೋಡಲು ಸಾಧ್ಯವಿಲ್ಲ.
ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಘೋಷಣೆ ಮಾಡಬೇಕು. ಉತ್ತರ ಕರ್ನಾಟಕ ನಾಯಕರಿಗೆ ಕ್ರೆಡಿಟ್ ಬರುತ್ತದೆ ಎನ್ನುವ ಉದ್ದೇಶವು ಇರಬಹುದು. ಮೀಸಲಾತಿ ಸಿಕ್ರೆ ಅವರಿಗೆ ಕ್ರೆಡಿಟ್ ಹೋಗುತ್ತದೆ ಎನ್ನುವ ಉದ್ದೇಶ. ಉತ್ತರ ಕರ್ನಾಟಕ ಒಬ್ಬ ವ್ಯಕ್ತಿ ಹಾಗೂ ದಕ್ಷಿಣ ಕರ್ನಾಟಕ ( KARANATAKA ) ದ ಕೆಲವರು ಸೇರಿ ಕುತಂತ್ರ ಮಾಡ್ತಾ ಇದ್ದಾರೆ. ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡ್ತಾ ಇದ್ದಾರೆ. ಅವರ ಹೆಸರನ್ನು ನಾನು ಹೇಳೋದಿಲ್ಲ ಅದು ಎಲ್ಲರಿಗೂ ಗೊತ್ತಿದೆ. ಚುನಾವಣೆಯಲ್ಲಿ ಮೀಸಲಾತಿ ಹೋರಾಟಕ್ಕೆ ಅನ್ಯಾಯ ಮಾಡಿದವ್ರಿಗೆ ಸಮಾಜ ತಕ್ಕ ಪಾಠವನ್ನು ಕಲಿಸುತ್ತದೆ ಎಂದು ಹೇಳಿದ್ರು.
ಇದನ್ನು ಓದಿ :- ಸಿದ್ದರಾಮಯ್ಯ ವಿರುದ್ಧ ಸಿದ್ದು ನಿಜ ಕನಸುಗಳು – ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ