ನಟ ಕಮಲ್ ಹಾಸನ್ ( KAMAL HASAN ) ನಟನೆಯ ‘ಪುಷ್ಪಕ ವಿಮಾನ’ ( PUSHPAKA VIMANA ) ಹೊಸ ದಾಖಲೆ ಬರೆದಿತ್ತು. 1987ರಲ್ಲಿ ಮೂಡಿ ಬಂದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಗೆದ್ದಿತ್ತು.
Among the great directors I have worked with Singeetham Srinivasa Rao is the youngest till date.Our endeavour called Pushpak is now older than us it is 35 years old.Sir we have to keep our art young can't allow it to age.I know you would chuckle,it is one of my favourite music.
— Kamal Haasan (@ikamalhaasan) November 27, 2022
ಈ ಸಿನಿಮಾ ಮಾಡಿದ ದಾಖಲೆಗಳು ಹಲವು. ‘ಪುಷ್ಪಕ ವಿಮಾನ’ ಸಿನಿಮಾ ಮೂಕಿ ಚಿತ್ರ. ಇಡೀ ಚಿತ್ರದಲ್ಲಿ ಒಂದೇ ಒಂದು ಮಾತು ಕೂಡ ಇರಲಿಲ್ಲ. ಈ ಸಿನಿಮಾ ತೆರೆಗೆ ಬಂದು ನ. 27ಕ್ಕೆ 35 ವರ್ಷಗಳು ಕಳೆದಿವೆ. ಇದನ್ನು ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ. ಅವರ ವೃತ್ತಿ ಬದುಕನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡ ಹೋದ ಖ್ಯಾತಿ ಈ ಚಿತ್ರಕ್ಕೆ ಸಿಗುತ್ತದೆ. ಹಲವು ಕಲಾವಿದರು ಚಾಲೆಂಜಿಂಗ್ ಪಾತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಇದನ್ನೂ ಓದಿ : – ಒಕ್ಕಲಿಗರ ಮೀಸಲಾತಿ ವಿಚಾರ – ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ – ಸಿಎಂ ಬೊಮ್ಮಾಯಿ
ಕಮಲ್ ಹಾಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ವೃತ್ತಿ ಜೀವನದಲ್ಲಿ ಹಲವು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿ ತೋರಿಸಿದ್ದಾರೆ. ಆ ಪೈಕಿ ‘ಪುಷ್ಪಕ ವಿಮಾನ’ ಚಿತ್ರ ಕೂಡ ಒಂದು. ಈ ಸಿನಿಮಾ 1987ರ ನ. 27ರಂದು ರಿಲೀಸ್ ಆಯಿತು. 35 ಲಕ್ಷ ಬಜೆಟ್ ನಲ್ಲಿ ಸಿದ್ಧವಾದ ಈ ಸಿನಿಮಾ 1 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಕನ್ನಡದಲ್ಲಿ ‘ಪುಷ್ಪಕ ವಿಮಾನ’ ಹೆಸರಿನಲ್ಲಿ ರಿಲೀಸ್ ಆಯಿತು.
ಉತ್ತರ ಭಾರತದಲ್ಲಿ ‘ಪುಷ್ಪಕ್’ ಹೆಸರಿನಲ್ಲಿ ಚಿತ್ರ ಬಿಡುಗಡೆ ಕಂಡಿತ್ತು. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ. ಅಮಲಾ ಅಕ್ಕಿನೇನಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಕಮಲ್ ಹಾಸನ್ ಅವರು ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ : – ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ – ಕೆ.ಸಿ ವೇಣುಗೋಪಾಲ್ ಗೆ ಗಾಯ!