ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘777 ಚಾರ್ಲಿ’ ಚಿತ್ರ ವೀಕ್ಷಿಸಿದರು. ಉಡುಪಿ ಶಾಸಕ ರಘುಪತಿ ಭಟ್, ಸಚಿವರಾದ ಆರ್ಅಶೋಕ್, ಬಿ.ಸಿ.ನಾಗೇಶ್ ಮುಂತಾದವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘777 ಚಾರ್ಲಿ’ ಚಿತ್ರ ವೀಕ್ಷಿಸಿದರು.
‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಕಣ್ಣೀರು ಹಾಕಿದರು. ಸಿನಿಮಾದಲ್ಲಿರುವ ಚಾರ್ಲಿಯನ್ನು ಕಂಡು ತಮ್ಮ ಮನೆಯಲ್ಲಿದ್ದ ‘ಸನ್ನಿ’ ಹೆಸರಿನ ಶ್ವಾನವನ್ನು ನೆನೆದು ಬಸವರಾಜ ಬೊಮ್ಮಾಯಿ ಕಣ್ಣೀರಿಟ್ಟರು.
‘777 ಚಾರ್ಲಿ’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಶ್ವಾನ ಚಾರ್ಲಿ ಸಾವನ್ನಪ್ಪುತ್ತದೆ. ಆ ದೃಶ್ಯವನ್ನು ಕಂಡ ಬಸವರಾಜ ಬೊಮ್ಮಾಯಿ ತಮ್ಮ ಶ್ವಾನ ಸನ್ನಿ ಅಗಲಿದ ಕ್ಷಣವನ್ನು ನೆನೆದು ದುಃಖಿತರಾದರು. ಸನ್ನಿಯನ್ನ ನೆನೆದು ದುಃಖ ಉಮ್ಮಳಿಸಿ ಬಂದ ಪರಿಣಾಮ, ಎಲ್ಲರೆದುರು ಸಿಎಂ ಬಸವರಾಜ ಬೊಮ್ಮಾಯಿ ಪುಟ್ಟ ಮಕ್ಕಳಂತೆ ಗಳಗಳಗೆ ಅತ್ತುಬಿಟ್ಟಿದ್ದಾರೆ. ಇದನ್ನೂ ಓದಿ : – ತಮಿಳುನಾಡಿನವರ ಬೇಡಿಕೆ ಕಾನೂನು ಬಾಹಿರ – ನಮ್ಮ ನೀರಿಗೆ ಹುನ್ನಾರ ನಡೆಸುತ್ತಿದ್ದಾರೆ – ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ವಾನ ಪ್ರೇಮಿ. ಬಸವರಾಜ ಬೊಮ್ಮಾಯಿ ತಮ್ಮ ಮನೆಯಲ್ಲಿ ಸನ್ನಿ ಎಂಬ ಹೆಸರಿನ ಶ್ವಾನವೊಂದನ್ನು ಸಾಕಿದ್ದರು. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸನ್ನಿ ಸಾವನ್ನಪ್ಪಿತ್ತು. ‘’ನಮ್ಮ ಮನೆಯ ಮುದ್ದಿನ ನಾಯಿ ಸನ್ನಿ ವಯೋಸಹಜವಾಗಿ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಸನ್ನಿ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು’’ ಎಂದು ಭಾವುಕರಾಗಿ ಬಸವರಾಜ ಬೊಮ್ಮಾಯ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ : – ನ್ಯಾಷನಲ್ ಹೆರಾಲ್ಡ್ ಕೇಸ್ – ಇಂದೂ ಕೂಡ ED ಯಿಂದ ರಾಹುಲ್ ಗಾಂಧಿ ವಿಚಾರಣೆ