ವ್ಯಕ್ತಿಯೊಬ್ಬ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಚುನಾವಣೆ (Election) ಗೆ ಸ್ಪರ್ಧಿಸುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ (Application) ಯನ್ನು ಸುಪ್ರೀಂ ಕೋರ್ಟ್ (Supreme court) ವಜಾಗೊಳಿಸಿದೆ. ಎರಡು ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಯ್ಕೆಯನ್ನು ನೀಡುವ ಮೂಲಕ ರಾಜಕೀಯ ಪ್ರಜಾಪ್ರಭುತ್ವವನ್ನು ಮುಂದುವರಿಸುವುದೇ ಅಂತಿಮವಾಗಿ ಸಂಸತ್ತಿನ ಆಯ್ಕೆ ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY.Chandrachud) ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶವನ್ನು ನೀಡಿದೆ. ಇದು ಶಾಸಕಾಂಗ ನೀತಿ ಮತ್ತು ಸಂಸದೀಯ ಸಾರ್ವಭೌಮತೆಗೆ ಸೇರಿದ ವಿಚಾರ ಆಗಿರುವುದರಿಂದ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ : – ಮದ್ಯದಂಗಡಿ ಮುಂದೆ ಬಿಡಾಡಿ ಹಸು ಕಟ್ಟಿ ಹಾಕಿ – ಬಿಜೆಪಿ ನಾಯಕಿ ಉಮಾಭಾರತಿ ಪ್ರತಿಭಟನೆ
ಎರಡು ಕಡೆ ಸ್ಪರ್ಧೆ ಮಾಡಿದರೆ ತಪ್ಪೇನು?
ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ, ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದಾಗ ಎಲ್ಲಿಂದ ಗೆಲ್ಲಬಹುದು ಎಂದು ನಿಮಗೆ ತಿಳಿದಿರುವುದಿಲ್ಲ. ಹೀಗಾಗಿ ಎರಡು ಕಡೆ ಸ್ಪರ್ಧೆ ಮಾಡಿದರೆ ತಪ್ಪೇನು? ಇದೆಲ್ಲ ಪ್ರಜಾಪ್ರಭುತ್ವ (Democracy) ದ ವ್ಯವಸ್ಥೆಯ ಚುನಾವಣೆಯ ಒಂದು ಭಾಗ. ಅಷ್ಟಕ್ಕೂ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಹುದೇ? ಇಲ್ಲವೇ ಎಂಬುವುದನ್ನು ನಿರ್ಧರಿಸಬೇಕಾಗಿರುವುದು ಪಾರ್ಲಿಮೆಂಟ್ನ ಕೆಲಸ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ : – ಕಿಚ್ಚನ ಜೊತೆ ಚಿತ್ರ ರಂಗದ ಸಮಸ್ಯೆ ಕುರಿತು ಚರ್ಚಿಸಿದ್ದೇವೆ – ಡಿ.ಕೆ.ಶಿವಕುಮಾರ್