ಕೊಪ್ಪಳದಲ್ಲಿಯೂ (Koppala) ಸದ್ದಿಲ್ಲದೆ ಅಕ್ಷರ ದಾಸೋಹ (Akshara dasoha) ನಡೆಯುತ್ತಿದೆ. 5000 ವಿದ್ಯಾರ್ಥಿಗಳ (5000 students) ಉಚಿತ ವಸತಿ (Free hostel) ,ಪ್ರಸಾದ ನಿಲಯ ಕೊಪ್ಪಳದಲ್ಲಿದೆ. ಅದುವೇ ಕೊಪ್ಪಳ ನಗರದ ಗವಿ ಮಠ (Gavi mutt) ಆವರಣದಲ್ಲಿರುವ ಪ್ರಸಾದ ನಿಲಯ. ಮರಿಶಾಂತವೀರ ಸ್ವಾಮೀಜಿ (Marishanthaveera swamiji) 16 ವರ್ಷ ಕಾಶಿಯಲ್ಲಿ (Kashi)_ ಆಯುರ್ವೇದ, ಸಂಸ್ಕೃತ ಹಾಗೂ ಯೋಗ ವಿದ್ಯಾಭ್ಯಾಸ ಮಾಡಿ ಕೊಪ್ಪಳ ಕ್ಕೆ ಮರಳಿದರು.
ಶ್ರೀಗಳು ಊರೂರು ತಿರುಗಿ ಎರಡ್ಮೂರು ರೂಪಾಯಿ ಭಿಕ್ಷೆ ಭೇಡಿ ಮಕ್ಕಳಿಗೆ ಶಿಕ್ಷಣ ನೀಡಿದರು. ಆಗ ಇನ್ನು ಪ್ರಸಾದ ನಿಲಯ ಆರಂಭಿಸಿರಲಿಲ್ಲ. ಮಠಕ್ಕೆ ಬಂದ ಭಕ್ತರು ಮೀಸಲು ತುಪ್ಪದ ದೀಪ ಹಚ್ಚಿದರೆ ಮಕ್ಕಳು ಅದನ್ನು ತಿನ್ನುತ್ತಿದ್ದರು. ಭಕ್ತರು ಅಕ್ರೋಶಗೊಂಡು ಅಂತಹ ಮಕ್ಕಳನ್ನು ಮಠದಿಂದ ಕಳುಹಿಸಲು ತಿಳಿಸಿದ್ದರು. ಆಗ ಶ್ರೀಗಳು ನೀವು ಹಾರುವ ದೀಪಕ್ಕೆ ಮೀಸಲು ತುಪ್ಪ ಹಾಕಿದ್ದೀರಿ. ಈಗ ಅದು ಹಾರದ ದೀಪಕ್ಕೆ ಮೀಸಲಾಗಿದೆ ಎಂದು ತಿಳಿಸಿ ತಕ್ಷಣವೇ ಪ್ರಸಾದ ನಿಲಯ ಆರಂಭಿಸಿದ್ರು. ಇಂದು ಈ ಮರಿ ಶಾಂತ ವೀರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ದಿನ, ಈ ದಿನ ಕೊಪ್ಪಳ ನಗರದ ಗವಿ ಮಠ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನವ ಗವಿ ಸಿದ್ದೇಶ್ವರ (Abhinava gavi siddeshwara) ಶ್ರೀಗಳು ಕಣ್ಣೀರು ಹಾಕಿದ್ದಾರೆ. ವಸತಿ ನಿಲಯ ನಡೆದು ಬಂದ ದಾರಿ ನೆನೆದು ಭಾವುಕರಾಗಿದ್ದಾರೆ. ನನ್ನ ಜೋಳಿಗೆಗೆ ಭಗವಂತ ಶಕ್ತಿ ಕೊಡಲಿ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 2 ರೂಪಾಯಿ ಭಿಕ್ಷೆ ಬೇಡಿ ವಸತಿ ನಿಲಯ ಮಾಡಿದ್ದಾರೆ. ಇದನ್ನೂ ಓದಿ : – ಮೂರು ಕೋಟಿ ಜನಸಂಖ್ಯೆ ಇದ್ದಲ್ಲಿ ಎರಡು ರಾಜ್ಯ – ಇದು ಬಿಜೆಪಿ ಅಜೆಂಡಾ ಎಂದ ಸತೀಶ್ ಜಾರಕಿಹೊಳಿ
ಮಕ್ಕಳ ಬಗ್ಗೆ ಅವರಿಗೆ ಅಪಾರ ಪ್ರೀತಿಯಿತ್ತು. ಹೀಗಾಗಿ ನಾನು ಸಾವಿರಾರು ಬಡಮಕ್ಕಳಿಗೆ ವಸತಿ ನಿಲಯ ಮಾಡಲು ಸಂಕಲ್ಪ ಮಾಡಿದ್ದೇನೆ. ಜೋಳಿಗೆಯಲ್ಲಿ ಶಕ್ತಿ ಕೊಟ್ಟಷ್ಟು ಮಕ್ಕಳನ್ನ ಓದಿಸುತ್ತೇನೆ ಎಂದು ಶ್ರೀಗಳು ಹೇಳಿದ್ರು. 160 ಮಕ್ಕಳಿಂದ ಇದೀಗ 3500 ಸಾವಿರ ಮಕ್ಕಳಿದ್ದಾರೆ. ಎಲ್ಲೆಲ್ಲಿ ಮಠದಲ್ಲಿ ಜಾಗ ಇದೆ ಅಲ್ಲಿ ಮಕ್ಕಳನ್ನ ಹಾಕಿದ್ದಾರೆ. ಅವರಿಗಾಗಿ ಈ ವಸತಿ, ಪ್ರಸಾದ ನಿಲಯ ಎಂದ ಶ್ರೀಗಳು ಹೇಳಿದ್ರು. ಇದನ್ನೂ ಓದಿ: – ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಪಾಲಾಗುತ್ತಾ ಶಿವಸೇನೆ….!