ಮುಂಬರುವ ವಿಧಾನಸಭೆ ಚುನಾವಣೆ (Vidhanasabha election) ಯಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ ಎ ಮಂಜು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD.Kumaraswamy) ಘೋಷಿಸಿದ್ದಾರೆ.
ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಅರಕಲಗೂಡು ಕ್ಷೇತ್ರದಿಂದ ಮಂಜು ಅವರು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಈಗಾಗಲೇ ಮಂಜು ಜೊತೆ ಮಾತುಕತೆ ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ. ಎಟಿ ರಾಮಸ್ವಾಮಿ ಹಾಗೂ ಅರಸೀಕೆರೆ (Arasikere) ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಕಳೆದ ಎರಡು ವರ್ಷಗಳಿಂದ ನಮ್ಮ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ, ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಹೆಚ್ ಡಿಕೆ ಹೇಳಿದ್ದಾರೆ. ಸಿಡಿ ಯಾತ್ರೆ ಎಂದು ಬಿಜೆಪಿ ಅವರು ಇಟ್ಟುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahalad joshi) ಗೆ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಪಂಚರತ್ನ ಅಲ್ಲಾ ನವಗ್ರಹ ಎಂದು ಜೆಡಿಎಸ್ ನವರು ಹೆಸರು ಇಟ್ಟುಕೊಳ್ಳಬೇಕು ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ ಜೋಶಿ ನಮ್ಮ ಪಕ್ಷದ ನಾಯಕರ ಸಿಡಿ ಸಂಕಲ್ಪ ಎಂದು ಹೆಸರಿಟ್ಟು ಯಾತ್ರೆ ಮಾಡಲಿ. ಇದನ್ನುಓದಿ :- ಸಿದ್ದರಾಮಯ್ಯ ಸೋಲುವುದು ಬೇಡ, ಈ ಬಾರಿ ಅವರು ಗೆಲ್ಲಲಿ: ಸಚಿವ ಸುಧಾಕರ್ ಅಚ್ಚರಿ ಹೇಳಿಕೆ
ಸಿಡಿ ಯಾತ್ರೆ (cd yatre) ಎಂದು ಇಟ್ಟುಕೊಳ್ಳಲಿ, ಅವಾಗ ನಾವು ನವಗ್ರಹ ಯಾತ್ರೆ ಎಂದು ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇನ್ನೂ ಕೇಂದ್ರ ಮಂತ್ರಿಯಾಗಿ ಉತ್ತರ ಕರ್ನಾಟಕಕ್ಕೆ ಜೋಶಿ ಅವರು ಏನು ಕೊಡುಗೆ ಕೊಟ್ಟಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ. ಕುಟುಂಬದಲ್ಲಿ ಅಧಿಕಾರದ ಸ್ಥಾನಕ್ಕಾಗಿ ಆಸೆ ಇದ್ದೇ ಇರುತ್ತೇ. ಅವುಗಳನ್ನೆಲ್ಲವನ್ನು ನಾವು ಕೂತು ಚರ್ಚೆ ಮಾಡುತ್ತೇವೆ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನುಓದಿ :- ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪ- ಬಿಜೆಪಿ MLC ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR