ಮೂರು ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ, ಕೆಟ್ಟದನ್ನ ಮಾಡಲ್ಲ . ಈ ಬಾರಿ ತಾಳ್ಮೆಯಿಂದ ಚುನಾವಣೆ ಮಾಡಬೇಕೆಂದು ಅಂದುಕೊಂಡಿದ್ದೇನೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi hebbalker) ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ.
ಹಂತ ಹಂತದಲ್ಲಿ ನಾವು ಅಗ್ನಿ ಪರೀಕ್ಷೆ ಎದುರಿಸಬೇಕು. ಆ ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಲೆಕ್ಕ. ಮಹಿಳೆ ಅಂದರೆ ಸಂಘರ್ಷ, ಅದು ಮಹಿಳೆ ಜೊತೆಯೇ ಬರುತ್ತೆ. ಹುಟ್ಟಿನಿಂದ ಸಾಯುವವರೆಗೂ ಪರೀಕ್ಷೆಗಳನ್ನ ಹೊತ್ತುಕೊಂಡೇ ಇರಬೇಕು ಎದುರಿಸಬೇಕು, ಪಾಸಾಗಬೇಕು . ನಾನು ಮಾಡಿದ ಅಭಿವೃದ್ಧಿ ಕೆಲಸದಿಂದ ಚುನಾವಣೆಯಲ್ಲಿ ಗೆಲ್ಲಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಮಹಿಳೆಯರ ಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ. ಹಾಗಾಗಿ 3 ತಿಂಗಳು ಬಹಳ ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ಹೇಳಿದರು. ಇದನ್ನುಓದಿ :- ಬಿಎಸ್ ವೈ ಬಗ್ಗೆ ನನಗೆ ಅಪಾರವಾದ ಗೌರವವಿದೆ, ಅನುಕಂಪವಿದೆ – ಸಿದ್ದರಾಮಯ್ಯ
ಇದೇ ವೇಳೆ ಕುಮಾರಸ್ವಾಮಿ (Kumaraswamy) ಹೇಳಿಕೆ ನಾನು ಕೇಳಿಲ್ಲ. ಕುಮಾರಸ್ವಾಮಿ ಅಣ್ಣನ ಬಗ್ಗೆ ತುಂಬಾ ಗೌರವ ಇದೆ. ಅವರು ಯಾವ ಮೂಲದಿಂದ ಹೇಳಿದ್ದಾರೆ ಗೊತ್ತಿಲ್ಲ, ಅದಕ್ಕೆ ನಾನು ಪ್ರತಿಕ್ರಿಯೇ ನೀಡುವುದು ಸರಿಯಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದನ್ನುಓದಿ :- ಆರ್ಕಿಡ್ ಶಾಲೆ ಅವಾಂತರ – 500 ಶಾಲೆಗಳಿಗೆ ನೋಟಿಸ್