ವಿಶ್ವ ಯೋಗ ದಿನಾಚರಣೆ’ ಹಿನ್ನೆಲೆ ಬೆಂಗಳೂರಿನ ಮಲೇಶ್ವರಂನಲ್ಲಿರುವ ಬಿಜೆಪಿ (BJP)ಕಚೇರಿಯಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಚಂದನವನದ ನಟಿ ಅದಿತಿ ಪ್ರಭುದೇವ ತನ್ನ ಭಾವಿ ಪತಿ ಯಶಸ್ನೊಂದಿಗೆ ಬಂದಿದ್ದರು. ಅವರು ಯೋಗ (YOGA ) ಮಾಡಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಯೋಗ ಒಂದು ಬ್ರಹ್ಮಾಂಡ. ಯೋಗದಿಂದ ದೇಹ, ಮನಸ್ಸು, ಆತ್ಮ, ಪರಮಾತ್ಮವನ್ನು ಒಟ್ಟಿಗೆ ಸೇರಿಸುತ್ತೆ. ಇದನ್ನೂ ಓದಿ : – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ
ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಯೋಗ ಅಭ್ಯಾಸದಿಂದ ಉತ್ತಮ ವ್ಯಕ್ತಿಯಾಗಿ ರೂಪುಕೊಳ್ಳಲು ಸಾಧ್ಯ. ಆದರೆ ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : – ಮೈಸೂರಿನ ಪರಂಪರೆಯನ್ನ ಕೊಂಡಾಡಿದ ಮೋದಿ – ಕನ್ನಡದಲ್ಲಿ ಮಾತು ಆರಂಭಿಸಿ ಜನರನ್ನ ಹುರಿದುಂಬಿಸಿದ ಪ್ರಧಾನಿ