ದೆಹಲಿ ಪಾಲಿಕೆಯ ಚುನಾವಣೆಯ ಫಲಿತಾಂಶ(Delhi Municipal Election Results) ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್(AAP) ಅಧಿಕಾರಕ್ಕೆ ಏರಿದೆ. ಈ ಮೂಲಕ 15 ವರ್ಷಗಳ ಬಿಜೆಪಿ(BJP) ಆಡಳಿತ ಅಂತ್ಯಗೊಂಡಿದೆ. ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮತ್ತು ಆಪ್ ಮಧ್ಯೆ ನೇರಾನೇರ ಸ್ಪರ್ಧೆ ಇತ್ತು. ಬಳಿಕ ಆಪ್ ಮುನ್ನಡೆಯನ್ನು ಕಾಯ್ದುಕೊಂಡಿತು.
ಚುನಾವಣೋತ್ತರ ಸಮೀಕ್ಷೆಗಳು ಆಪ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಭವಿಷ್ಯ ನುಡಿದಿದ್ದವು. ಬಿಜೆಪಿ ( BJP ) ಮೂರಂಕಿ ದಾಟುವುದಿಲ್ಲ ಎಂದು ಹೇಳಿದ್ದವು. ಆದರೆ ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಆಪ್ಗೆ ಪ್ರಬಲ ಸ್ಪರ್ಧೆ ನೀಡಿದೆ. 2007 ರಿಂದ ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿದೆ. ಡಿಸೆಂಬರ್ 4 ರಂದು ಚುನಾವಣೆ ನಡೆದಿದ್ದು 250 ಸ್ಥಾನಗಳಿರುವ ಪಾಲಿಕೆಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ.
ಇದನ್ನು ಓದಿ : – ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ – ಸಿಎಂ ಬೊಮ್ಮಾಯಿ ಗಂಭೀರ ಆರೋಪ..!