ಮದುವೆ ಡೇಟ್ ಅನೌನ್ಸ್ ಮಾಡಿದ ನಟಿ ಕಿಯಾರಾ ಅಡ್ವಾಣಿ…!

ಬಾಲಿವುಡ್ ನ ಮುದ್ದಾದ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಯ ಗುಡ್ ನ್ಯೂಸ್ ಗಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ಇದೀಗ ಶುಭ ಸುದ್ದಿ ಸಿಕ್ಕಿದೆ

ಬಾಲಿವುಡ್ ( BOLLYWOOD ) ನ ಮುದ್ದಾದ ಜೋಡಿ ಸಿದ್ಧಾರ್ಥ್ ( SIDDARTH ) ಮತ್ತು ಕಿಯಾರಾ ( KIYARA )ಮದುವೆಯ ಗುಡ್ ನ್ಯೂಸ್ ಗಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ಇದೀಗ ಶುಭ ಸುದ್ದಿ ಸಿಕ್ಕಿದೆ.

ಮದುವೆಯ ಬಗ್ಗೆ ನಟಿ ಕಿಯಾರಾ ಸೋಷಿಯಲ್ ಮೀಡಿಯಾದಲ್ಲಿ ಸೂಚನೆ ಕೊಟ್ಟಿದ್ದಾರೆ. ಬಿಟೌನ್ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸಾಕಷ್ಟು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಆದರೆ ಎಲ್ಲೂ ಕೂಡ ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಅಧಿಕೃತ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ಸದ್ಯದಲ್ಲೇ ಸಿಹಿ ಸುದ್ದಿ ಘೋಷಿಸುವುದಾಗಿ ಸ್ವತಃ ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ : ಮೆಟ್ರೋ ರೈಲು ಪ್ರಯಾಣದ ಖುಷಿ ಅನುಭವಿಸಿದ ಅಭಿಷೇಕ್ ಅಂಬರೀಶ್

 

View this post on Instagram

 

A post shared by KIARA (@kiaraaliaadvani)

`ಶೇರ್ಷಾ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ಸದ್ಯದಲ್ಲೇ ಹೊಸ ಬಾಳಿಗೆ ಕಾಲಿಡೋದು ಪಕ್ಕಾ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಹ ಕಿಯಾರಾ ಪೋಸ್ಟ್ ಕೂಡ ಸದ್ದು ಮಾಡುತ್ತಿದೆ. ಏನನ್ನೂ ಹೆಚ್ಚು ಕಾಲ ಸೀಕ್ರೆಟ್ ಆಗಿಡಲು ಸಾಧ್ಯವಿಲ್ಲ. ಶೀಘ್ರದಲ್ಲೇ ಘೋಷಿಸುತ್ತೇನೆ. ಕಾಯ್ತಿರಿ, ಡಿಸೆಂಬರ್ 2ಕ್ಕೆ ಎಂದು ನಟಿ ಮದುವೆ ಬಗ್ಗೆ ಸೂಚನೆ ನೀಡಿದ್ದಾರೆ. ಸ್ಪೆಷಲ್ ವೀಡಿಯೋ ಹಂಚಿಕೊಂಡು ಡಿ. 2 ಎಂದು ಕಿಯಾರಾ ಸೂಚನೆ ನೀಡಿರುವುದು. ಇದು ನಿಜಕ್ಕೂ ಸಿದ್ಧಾರ್ಥ್ ಜೊತೆಗಿನ ಮದುವೆ ಸುದ್ದಿನೇ ಎಂದು ಫ್ಯಾನ್ಸ್ ಗೆ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : – ಮಗನ ಜತೆ ಸೇರಿ ಪತಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಪತ್ನಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!