ಸೇನಾ ನೇಮಕಾತಿಗಾಗಿ ಅಗ್ನಿಪಥ್ (AGNIPATH)ಯೋಜನೆ ಯುವಕರಿಗೆ ಮಾಡಿದ ಅವಮಾನ ಎಂದು ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಗ್ನಿವೀರ್‌ನ ಪ್ರಯೋಜನಗಳು ಏನೇನು ಎಂದು ಎಣಿಕೆ ಮಾಡುವ ಬದಲು ಬಿಜೆಪಿ ಸದಸ್ಯರಿಗೆ ತಮ್ಮ ಎಷ್ಟು ಮಂದಿ ಮಕ್ಕಳನ್ನು ಅಗ್ನಿಪಥ್ ಗೆ ಕಳುಹಿಸುತ್ತಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಅಖಿಲೇಶ್ ಸವಾಲು ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಖಿಲೇಶ್ ‘ಬಿಜೆಪಿ ತನ್ನ ಬೆಂಬಲಿಗರನ್ನು ‘ಅಗ್ನಿವೀರ್’ನ ಪ್ರಯೋಜನಗಳನ್ನು ಎಣಿಸಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ ಈ ಯೋಜನೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಶಿವಸೇನೆ ಶಾಸಕರೊಂದಿಗೆ ಏಕನಾಥ್ ಶಿಂಧೆ ನಾಪತ್ತೆ, ತುರ್ತು ಸಭೆ ಕರೆದ ಉದ್ಧವ್ ಠಾಕ್ರೆ
ಕೇಂದ್ರ ಸರ್ಕಾರದ ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಕೆಲವು ಪ್ರದೇಶಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಎಸ್‌ಪಿ ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಈ ಅಲ್ಪಾವಧಿಯ ಯೋಜನೆಯನ್ನು ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಎಂದು ಜರಿದಿವೆ.
ಇದನ್ನೂ ಓದಿ : – PRESIDENT ELECTION – ಟಿಎಂಸಿ ತೊರೆದ ಯಶ್ವಂತ್ ಸಿನ್ಙಾ – ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಸಾಧ್ಯತೆ