ನ್ಯೂಯಾರ್ಕ್ನಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ( air india )ವಿಮಾನದಲ್ಲಿ ನ. 26ರಂದು ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಉದ್ಯಮಿ ಶಂಕರ್ ಮಿಶ್ರಾನನ್ನು ಇದುವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ತಲೆಮರೆಸಿಕೊಂಡಿರುವ ಆತನ ಪತ್ತೆಗೆ ದಿಲ್ಲಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ.
ದಿಲ್ಲಿ (delhli) ಪೊಲೀಸರ ಎರಡು ತಂಡಗಳ ಪೈಕಿ ಒಂದು ತಂಡ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದೆ. ಶಂಕರ್ ಮಿಶ್ರಾನ ಸಹೋದರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಆತ ಕಡೆಯ ಬಾರಿ ಅಲ್ಲಿಗೆ ಬಂದಿದ್ದಾನೆ ಎನ್ನಲಾಗಿದೆ. ಮಿಶ್ರಾನ ಸಹೋದರಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಂಕರ್ ಮಿಶ್ರಾನ ತಂದೆ ನೆಲೆಸಿದ್ದಾರೆ. ಮಿಶ್ರಾ ದೇಶದಿಂದ ಪರಾರಿಯಾಗುವ ಸಾಧ್ಯತೆಯನ್ನು ತಡೆಯಲು ಪೊಲೀಸರು ‘ಲುಕ್ ಔಟ್ ಸುತ್ತೋಲೆ’ ಕೂಡ ಹೊರಡಿಸಿದ್ದಾರೆ. ನವೆಂಬರ್ 26ರಂದು ಘಟನೆ ನಡೆದಿದ್ದರೂ, ಅದರ ಬಗ್ಗೆ ಈವರೆಗೂ ಏಕೆ ವರದಿ ನೀಡಿಲ್ಲ ಎಂಬ ವಿವರಣೆ ಸೇರಿದಂತೆ, ಸಿಬ್ಬಂದಿ ಹಾಗೂ ಪೈಲಟ್ನಿಂದ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಮುಂಬಯಿ ಉದ್ಯಮಿ ಶಂಕರ್ ಮಿಶ್ರಾ ಬೇಡಿಕೊಂಡಿದ್ದ ಎನ್ನಲಾಗಿದೆ.ಈ ಘಟನೆಯಿಂದ ಪತ್ನಿ ಹಾಗೂ ಮಕ್ಕಳಿಗೆ ತೊಂದರೆಯಾಗುವುದನ್ನು ಬಯಸಿಲ್ಲ ಎಂದು ಹೇಳಿದ್ದಾಗಿ ಈಗ ಏರ್ ಇಂಡಿಯಾ ದಾಖಲಿಸಿರುವ ಎಫ್ಐಆರ್ ತಿಳಿಸಿದೆ. ಇದನ್ನು ಓದಿ :- ನಾನು ತಾಲಿಬಾನ್ನ 25 ಉಗ್ರರನ್ನು ಹೊಡೆದುರುಳಿಸಿದ್ದೆ- ಪ್ರಿನ್ಸ್ ಹ್ಯಾರಿ ಆತ್ಮಚರಿತ್ರೆ ‘ಸ್ಪೇರ್‘ನಲ್ಲಿ ಉಲ್ಲೇಖ
ಇದೀಗ ಮಹಿಳೆ ಹಾಗೂ ಆರೋಪಿಯ ನಡುವೆ ನಡೆದ ವಾಟ್ಸ್ ಆ್ಯಪ್ (whats app) ಸಂಭಾಷಣೆ ಬಹಿರಂಗಗೊಂಡಿದೆ. ಶಂಕರ್ನನ್ನು ಕ್ಷಮಿಸಿದ್ದೇನೆ, ದೂರು ದಾಖಲಿಸುವ ಉದ್ದೇಶ ನನಗಿಲ್ಲ ಎನ್ನುವ ರೀತಿಯಲ್ಲಿ ಸಂಭಾಷಣೆ ನಡೆದಿದೆ. ಆರೋಪಿ ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ, ಆರೋಪಿ ನವೆಂಬರ್ 28 ರಂದು ಬಟ್ಟೆ ಮತ್ತು ಬ್ಯಾಗ್ಗಳನ್ನು ಸ್ವಚ್ಛಗೊಳಿಸಿದ್ದಾರೆ. ನವೆಂಬರ್ 30 ರಂದು ಅದನ್ನು ತಲುಪಿಸಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮಹಿಳೆ r ಕೃತ್ಯವನ್ನು ಕ್ಷಮಿಸಿದ್ದಾರೆ. ದೂರು ದಾಖಲಿಸುವ ಉದ್ದೇಶವನ್ನು ಹೊಂದಿಲ್ಲ. ಮಹಿಳೆ ಏರ್ ಇಂಡಿಯಾಕ್ಕೆ ಪರಿಹಾರಕ್ಕಾಗಿ ಡಿಸೆಂಬರ್ 20 ರಂದು ದೂರು ನೀಡಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಿಶ್ರಾ ಅವರು ನವೆಂಬರ್ 28 ರಂದು ಇಬ್ಬರ ನಡುವೆ ಒಪ್ಪಂದ ಮಾಡಿಕೊಂಡು PayTM ನಲ್ಲಿ ಒಪ್ಪಂದದಂತೆ ಪರಿಹಾರವನ್ನು ಪಾವತಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ :- ಸಿದ್ದರಾಮಯ್ಯ ವರುಣಾ ಬಿಟ್ಟು ಎಲ್ಲಿಯೂ ನಿಲ್ಲೋದು ಬೇಡ – ಜಮೀರ್ ಅಹಮ್ಮದ್