ಬಾಲಿವುಡ್ ನಟ ರಣ್ ಬೀರ್ ಕಪೂರ್ ( ranbeerkapoor ) ಹಾಗೂ ಆಲಿಯಾ ಭಟ್ ( aliya bhat ) ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ದಂಪತಿಗೆ ಹೆಣ್ಣು ಮಗು ಜನಿಸಿದೆ.
ಹಲವು ವರ್ಷಗಳ ಡೇಟಿಂಗ್ ನಂತರ ರಣ್ ಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಜೂನ್ ನಲ್ಲಿ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ತಿಳಿಸಿ, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇದೀಗ ರಣ್ ಬೀರ್ ಕಪೂರ್ ದಂಪತಿ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಇದನ್ನೂ ಓದಿ : – ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಪ್ರಕರಣ ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಸೂಚನೆ – ಸಿಎಂ ಬೊಮ್ಮಾಯಿ
ಭಾನುವಾರ(ನ.6) ಬೆಳಿಗ್ಗೆ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣ್ ಬೀರ್ ಮತ್ತು ಆಲಿಯಾ ತಮ್ಮ ಚೊಚ್ಚಲ ಮಗುವಿಗೆ ಸ್ವಾಗತಿಸಿದ ಖುಷಿಯಲ್ಲಿದ್ದಾರೆ. ಹೆಣ್ಣು ಮಗುವಿಗೆ ತಾಯಿಯಾಗಿ ಆಲಿಯಾ, ಮುಂಬೈನ ಎಚ್.ಎನ್ ರಿಲಯನ್ಸ್ ಹಾಸ್ಪಿಟಲ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ : – 3 ಹೆಣ್ಣು ಮಕ್ಕಳ ನಂತರ 4 ನೇ ಮಗು ಹೆಣ್ಣಾಗಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ