ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ UPI ನೊಂದಿಗೆ ಕ್ರೆಡಿಟ್ ಕಾರ್ಡ್ (Credit card) ಲಿಂಕ್ ಮಾಡಬಹುದಾದ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಲ್ಲಿಸಿದೆ.
ಸದ್ಯ ಉಳಿತಾಯ ಹಾಗೂ ಕರೆಂಟ್ ಖಾತೆಗಳ ಮೂಲಕ UPI ಪಾವತಿಗಳನ್ನು ಮಾಡುವ ಆಯ್ಕೆ ಇದೆ. ಆದರೆ, ಕ್ರೆಡಿಟ್ ಕಾರ್ಡ್ಗಳ ಮೂಲಕವು UPI ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುವ ಸಲುವಾಗಿ ಆರ್ಬಿಐ ಹೊಸ ಪ್ರಸ್ತಾವನೆ ಸಲ್ಲಿಸಿದೆ. RBI ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯ ತಿಳಿಸಿದ್ದಾರೆ. ಇದನ್ನು ಓದಿ- ಆರ್ ಬಿಐ ವಿತ್ತೀಯ ನೀತಿ ಪ್ರಕಟ- ರೆಪೊ ದರ 50 ಬೇಸಿಸ್ ಪಾಯಿಂಟ್ ಹೆಚ್ಚಿಸಿ ಶೇ. 4.90ಕ್ಕೆ ಏರಿಕೆ
ಆರ್ಬಿಐ-ಉತ್ತೇಜಿತ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (RBI) ನೀಡಿದ ರುಪೇ ಕ್ರೆಡಿಟ್ ಕಾರ್ಡ್ಗಳೊಂದಿಗೆ (Rupay credit card) ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುವುದು ಮತ್ತು ಬೆಳವಣಿಗೆಗಳ ನಂತರ ಸೌಲಭ್ಯವನ್ನು ಮತ್ತಷ್ಟು ಲಭ್ಯಗೊಳಿಸಲಾಗುವುದು ಎಂದು ಶಕ್ತಿಕಾಂತ್ ದಾಸ್ (Shakthi kant das) ಹೇಳಿದ್ದಾರೆ. ಭಾರತದಲ್ಲಿ UPI ಅತ್ಯಂತ ಜನಪ್ರಿಯ ಆನ್ ಲೈನ್ ಪಾವತಿ ವಿಧಾನವಾಗಿದ್ದು, ದೇಶದಲ್ಲಿ 26 ಕೋಟಿಗೂ ಹೆಚ್ಚು ಅನನ್ಯ ಬಳಕೆದಾರರು ಮತ್ತು 5 ಕೋಟಿ ವ್ಯಾಪಾರಿಗಳು UPI ಪ್ಲಾಟ್ ಫಾರ್ಮ್ ನ ಆನ್ ಬೋರ್ಡ್ ನಲ್ಲಿದ್ದಾರೆ. ಇದನ್ನೂ ಓದಿ : – ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್