ಸಂವಿಧಾನ ಉಳಿಸುವ ಕೆಲಸ ಈಗ ಆಗಬೇಕಿದೆ ಎಂದು ಅಂಬೇಡ್ಕರ್ ಮೊಮ್ಮಗಳು ರಮಾಬಾಯಿ ( ramabai ) ಹೇಳಿದ್ದಾರೆ. ಕಳೆದ ಐದಾರು ವರ್ಷಗಳಿಂದ ದೇಶದ ಪರಿಸ್ಥಿತಿ ನೋಡಬಹುದು.
ಸಂವಿಧಾನವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಮನುಸ್ಮೃತಿ ಮಹಿಳೆಯರಿಗೆ ನಿರ್ಬಂಧ ಹಾಕಿದೆ. ಮಹಿಳೆಯರಿಗೆ ಶಿಕ್ಷಣ ಸಂವಿಧಾನದಿಂದ ಬಂದಿದೆ. ಇದಕ್ಕೆ ಅಂಬೇಡ್ಕರ್ ಸಂವಿಧಾನ ಕಾರಣ ಎಂದು ಹೇಳಿದ್ರು. ದಲಿತ ವ್ಯಕ್ತಿ ಶಾಲೆಯಲ್ಲಿ ಅಡುಗೆ ಮಾಡಿದ್ರೆ ಸವರ್ಣಿಯರು ಊಟ ಮಾಡಲ್ಲ. ಇದು ಅಸಮಾನತೆ ಇದೆ ಅಂತ ಎತ್ತಿ ತೋರಿಸುತ್ತೆ. ಹೀಗೆ ಮುಂದುವರಿದ್ರೆ ಯಾವತ್ತು ಸಮಜದಲ್ಲಿ ಸಮಾನತೆ ಬರಲ್ಲ. ಇದನ್ನೂ ಓದಿ : – ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಜಾ ಮಾಡಬೇಕು – ಟ್ವಿಟ್ ಮೂಲಕ ಕಿಡಿಕಾರಿದ ‘ಕಾಂಗ್ರೆಸ್’
ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಒಬ್ಬ ಸಾಹಿತಿಯನ್ನು ಬಂಧನ ಮಾಡಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ಬೇಲ್ ಸಿಗ್ತಾ ಇಲ್ಲ ಸರ್ಕಾರ ಒಂದಲ್ಲ ಒಂದು ಕಾರಣ ಹುಡಕುತ್ತಿದೆ. ಅಂಬೇಡ್ಕರ್ ಆಶಯದಂತೆ ದಲಿತ ಬಂಧುಗಳು ಒಂದಾಗಬೇಕು. ಮುಂದೆ ಒಗ್ಗಟ್ಟಿನಿಂದ ನಾವು ಹೋರಾಡೋಣ. ಎಂದು ಅಂಬೇಡ್ಕರ್ ಮೊಮ್ಮಗಳು ರಾಮಾಬಾಯಿ ಕರೆ ನೀಡಿದ್ದಾರೆ.
ಇದನ್ನೂ ಓದಿ : – ಇದು ಲಂಚ-ಮಂಚದ ಸರ್ಕಾರ – ಪ್ರಿಯಾಂಕ್ ಖರ್ಗೆ ವ್ಯಂಗ್ಯ