ನನ್ನ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ರೇಖಾ (Rekha) ಕಣ್ಣೀರು ಹಾಕಿದ್ದಾರೆ ಅನಂತ ರಾಜು ಆತ್ಮಹತ್ಯೆ ತುಂಬಾ ನೋವು ತಂದಿದೆ. ನಾನು ಹನಿಟ್ರಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ.
ಆರು ವರ್ಷದಿಂದ ಆನಂತರಾಜು ಜೊತೆಗೆ ಲೀವಿಂಗ್ ರಿಲೇಷನ್ ಷಿಪ್ ನಲ್ಲಿದ್ವಿ. ಪತ್ನಿ ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋದು. ಅನಂತರಾಜು ಈ ಹಿಂದೆ ಒಂದು ಸಾರಿ ಆತ್ಮಹತ್ಯೆ ಗೆ ಯತ್ನಿಸಿದ್ರು. ಆ ವೇಳೆ ಬಲವಂತವಾಗಿ ಡೆತ್ ನೋಟ್ ಬರೆಸಿಕೊಂಡಿದ್ದಾರೆ. ನಾನು ಸಾಮಾನ್ಯ ಮಹಿಳೆ . ನಂಗೆ ದಿನೇ ದಿನೇ ಕಿರುಕುಳ ಹೆಚ್ಚಾಗ್ತಿದೆ. ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ದ. ಸಿಎಂ ಬಸವರಾಜು ಬೊಮ್ಮಾಯಿ, ಗೃಹಸಚಿವರು ನಂಗೆ ನ್ಯಾಯ ಕೊಡಿಸಬೇಕು ಎಂದು ರೇಖಾ ಮನವಿ ಮಾಡಿದ್ದಾರೆ. ಇದನ್ನೂ ಓದಿ : – ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ – ಪ್ರತಿಭಟನಾಕಾರರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ