ಅಪ್ಪು ಅದೊಂದು ಕನಸು ನನಸು ಮಾಡಬೇಕಿತ್ತು – ‘ನಾ ನಿನ್ನ ಮರೆಯಲಾರೆ’ ಸಿನಿಮಾ ನೆನಪಿಸಿಕೊಂಡ ರಮ್ಯಾ

ಪುನೀತ್ ರಾಜ್ ಕುಮಾರ್ ( puneeth rajkumar ) ಸಿನಿಮಾ ಮೂಲಕವೇ ಸ್ಯಾಂಡಲ್ ವುಡ್ ( sandalwood ) ಗೆ ಪ್ರವೇಶ ಮಾಡಿದವರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ . ಹಾಗಾಗಿ ಡಾ.ರಾಜ್ ಕುಟುಂಬದ ಬಗ್ಗೆ ರಮ್ಯಾ ( ramya ) ಗೆ ವಿಶೇಷ ಗೌರವ. ಅದರಲ್ಲೂ ಅಪ್ಪು ಕಂಡರೆ ಎಲ್ಲಿಲ್ಲದ ಅಭಿಮಾನಿ. ಹಾಗಾಗಿ ಪದೇ ಪದೇ ಅಪ್ಪು ಜೊತೆ ನಟಿಸುವ ಮಾತುಗಳನ್ನು ಅಪ್ಪು ಕಾಲಾನಂತರವೂ ರಮ್ಯಾ ಮಾತನಾಡುತ್ತಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಕಂಡ ಕನಸೊಂದನ್ನು ರಮ್ಯಾ ಹಂಚಿಕೊಂಡಿದ್ದಾರೆ.


ಡಾ. ರಾಜ್ ಕುಮಾರ್ ಅಭಿನಯದ ‘ನಾ ನಿನ್ನ ಮರೆಯಲಾರೆ’ ಸಿನಿಮಾ 1976ರಲ್ಲಿ ಬಿಡುಗಡೆ ಆಯಿತು. ನಾಯಕಿಯಾಗಿ ಲಕ್ಷ್ಮಿ ನಟಿಸಿದ್ದರು. ಪ್ರೇಕ್ಷಕರ ಫೇವರಿಟ್ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಇಂದಿಗೂ ಸ್ಥಾನವಿದೆ. ಈ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ ರೀಕ್ರಿಯೇಟ್ ಮಾಡಬೇಕು ಎಂಬುದು ಪುನೀತ್ ರಾಜ್ ಕುಮಾರ್ ಅವರ ಆಸೆ ಆಗಿತ್ತು. ಲಕ್ಷ್ಮಿ ಮಾಡಿದ್ದ ಪಾತ್ರಕ್ಕೆ ರಮ್ಯಾ, ಅಣ್ಣಾವ್ರ ಪಾತ್ರಕ್ಕೆ ಪುನೀತ್ ಬಣ್ಣ ಹಚ್ಚಬೇಕಿತ್ತು. ಆದರೆ ಆ ಕನಸು ಕನಸಾಗಿಯೇ ಉಳಿಯುವಂತಾಗಿದ್ದು ಬೇಸರದ ಸಂಗತಿ. ಇದನ್ನೂ ಓದಿ : – ಎಲೆಜಬೆತ್ ರಾಣಿಯ ಕಿರೀಟದಲ್ಲಿದ್ದ ಭಾರತದ ಕೊಹಿನೂರು ವಜ್ರ ಯಾರಿಗೆ ಸೇರುತ್ತೆ…?


ಪುನೀತ್ ರಾಜ್ ಕುಮಾರ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಈ ಸಂದರ್ಭ ದಲ್ಲಿ ‘ನಾ ನಿನ್ನ ಮರೆಯಲಾರೆ’ ರೀ-ಕ್ರಿಯೇಟ್ ವಿಚಾರದ ಬಗ್ಗೆ ಹೇಳಿದ್ದಾರೆ. ಅಪ್ಪು ಅವರು ಈ ರೀತಿ ಕನಸು ಕಂಡಿದ್ದರು ಎಂಬುದನ್ನು ಕೃಷ್ಣ ತಿಳಿಸಿದ್ದಾರೆ.


ಈ ವಿಚಾರದ ಕುರಿತು ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಇದು ನಿಜ. ಅಪ್ಪು ಮತ್ತು ನಾನು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : –  ನಿಲ್ಲದ ಮಳೆಯ ಅವಾಂತರ – ಕರ್ನಾಟಕದ 10 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!