ಭಾರತೀಯ ಸೇನಾ ಹೆಲಿಕಾಪ್ಟರ್ ಅರುಣಾಚಲ ( ARUNACHALA ) ದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್ ಗ್ರಾಮದಲ್ಲಿ ಪತನಗೊಂಡಿದೆ. ಅಪಘಾತ ನಡೆದಿರುವ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಸೇನೆ ತಿಳಿಸಿದೆ. ಪತನವಾಗಿರುವ ಹೆಲಿಕಾಪ್ಟರ್ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ತಯಾರಿಸಿದೆ.
ರುದ್ರ ಎಂದು ಕರೆಯಲಾಗುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಮಿಗ್ಗಿಂಗ್ ಗ್ರಾಮದಲ್ಲಿ ಪತನವಾಗಿದೆ. ವರದಿಗಳ ಪ್ರಕಾರ ಘಟನೆ ನಡೆದಿರುವ ಸ್ಥಳದಲ್ಲಿ ಅನುಕೂಲಕರ ರಸ್ತೆ ಸಂಪರ್ಕ ಇಲ್ಲ ಎನ್ನಲಾಗಿದೆ. ಇದೀಗ ಶೋಧ ನಡೆಸಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ.
ಇದನ್ನೂ ಓದಿ : – ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ಶಿವಣ್ಣ ಇನ್ನಿಲ್ಲ