ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಆಸಾನಿ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದ ಹಲವು ಕಡೆ ಜೋರು ಮಳೆ ಆಗ್ತಿದೆ.
ಬೆಂಗಳೂರಿನಲ್ಲೂ ಚಂಡಮಾರುತದ ಪರಿಣಾಮ ಬೇಸಿಗೆ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದೆ. ನಗರದಲ್ಲಿ ನೆನ್ನೆಯಿಂದಲೂ ಸಹ ಮೋಡ ಕವಿದ ವಾತಾವರಣವಿದೆ. ನಿನ್ನೆ ನಗರದ ಬಹು ಭಾಗಗಳಲ್ಲಿ ಗಾಳಿ ಜೊತೆಗೆ ತುಂತುರು ಮಳೆ ಆಗಿತ್ತು. ಇದನ್ನೂ ಓದಿ : – ದೆಹಲಿಯಲ್ಲಿ ಸಿಎಂ – ಇಂದು ಹೈಕಮಾಂಡ್ ನಿಂದ ಬಿಗ್ ಸಂದೇಶ ನಿರೀಕ್ಷೆ
ಇಂದು ಸಹ ಅಂತಹದ್ದೆ ಪರಿಸ್ಥಿತಿ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಗುಡುಗು, ಮಿಂಚು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ.
ಜೊತೆಗೆ ಗಾಳಿಯ ವೇಗ ಸಹ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಅನೇಕ ಕಡೆ ಅಸನಿ ಎಫೆಕ್ಟ್ ಇರಲಿದೆ.
ಇದನ್ನೂ ಓದಿ : – ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ