ತುಮಕೂರಿನ ಸುರೇಶ್ ಗೌಡ ವಿರುದ್ಧ100ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ ಅಟ್ಟಿಕಾ ಬಾಬು…!

ಮಾಜಿ ಶಾಸಕ ಸುರೇಶ್ ಗೌಡ (Suresh gowda) ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ಗೌಡ ವಿರುದ್ಧ 100ಕೋಟಿ ರೂ ಮಾನನಷ್ಟ ಮೊಕದ್ದಮೆ (Defamation) ಯ ನೋಟಿಸ್ ನ್ನು ಅಟಿಕಾ ಬಾಬು (Atica babu) ನೀಡಿದ್ದಾರೆ. ಕೊಲೆಗೆ ಸುಪಾರಿ ಆರೋಪದಲ್ಲಿ ಅಟಿಕಾ ಬಾಬು ಹೆಸರನ್ನು ಬಿ.ಸುರೇಶ್ ಗೌಡ ತಳಕು ಹಾಕಿದ್ದಾರೆ.ಶಾಸಕ ಗೌರಿಶಂಕರ್, ಹಿರೇಹಳ್ಳಿ ಮಹೇಶ್ ಹಾಗೂ ಅಟಿಕಾ ಬಾಬು ವಿರುದ್ಧ ಸುರೇಶ್ ಗೌಡ ಆರೋಪ ಮಾಡಿದ್ದರು.

ದೂರಿನಲ್ಲಿ ಮೂವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ಸಂಬಂಧ ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಅಟಿಕಾ ಬಾಬು ವಿರುದ್ದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸುರೇಶ್ ಗೌಡ ವಿರುದ್ಧ 100ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ನೋಟಿಸ್ ನ್ನು ಅಟಿಕಾ ಬಾಬು ನೀಡಿದ್ದಾರೆ. ಕೊಲೆ ಮಾಡಲು ಜೈಲಿನಲ್ಲಿರುವ ಖೈದಿಗೆ ಸುಪಾರಿ ನೀಡಿದ್ದಾರೆಂದು ಆರೋಪ ಮಾಡಲಾಗಿದೆ. ಜೈಲಿನಲ್ಲಿರುವ ಖೈದಿಗೆ ಅಟಿಕಾ ಬಾಬು ಮುಖಾಂತರ ಹಣ ನೀಡಲಾಗುತ್ತದೆ ಎಂದು ಆರೋಪ ಮಾಡಲಾಗಿದೆ. ಇದನ್ನೂ ಓದಿ : – ಮೊದಲು ಮಹಾರಾಷ್ಟ್ರ ಪುಂಡಾಟ ನಿಲ್ಲಿಸುವ ಕೆಲಸ ಮಾಡಲಿ – ಸಿದ್ದರಾಮಯ್ಯ

ಎಫ್ ಐ ಆರ್ ನಲ್ಲಿ ಎ3 ಆರೋಪಿಯಾಗಿ ಅಟಿಕಾ ಬಾಬು ಹೆಸರು ಉಲ್ಲೇಖವಾಗಿತ್ತು. ಅಟಿಕಾ ಬಾಬು ಪರವಾಗಿ ಮಾಜಿ ಶಾಸಕ ಬಿ.ಸುರೇಶ್ ಗೌಡಗೆ ವಕೀಲ ಎಸ್.ಎಂ.ಪಾಷಾ (ಬೆಂಗಳೂರಿನ ಆಕ್ಸೆಸ್ ಲಾ ಸಂಸ್ಥೆ) ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ : – ಬಾಂಬ್ ಹಾಕೋರಿಗೆ ಬಿರಿಯಾನಿ ಕೊಡೋದು ಕಾಂಗ್ರೆಸ್ ನೀತಿ – ಸಿ. ಟಿ. ರವಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!