ಮೈಸೂರು (Mysuru) ನಾಡ ಹಬ್ಬ ದಸರಾ (Dusserha) ಮಹೋತ್ಸವ ಹಿನ್ನೆಲೆಯಲ್ಲಿ ಗಜಪಡೆಗೆ ತೂಕ ಪರಿಶೀಲನೆ ನಡೆಸಲಾಗಿದೆ. ಎರಡು ದಿನಗಳ ಹಿಂದೆ ಕಾಡಿನಿಂದ ನಾಡಿಗೆ ಐದು ಆನೆ (Elephants) ಗಳು ಆಗಮಿಸಿದ್ದವು. ಐದು ಆನೆಗಳ ಜೊತೆಗೆ ಉಳಿದ ಮೊದಲ ಹಂತದ ಆನೆಗಳಿಗೂ ಮತ್ತೊಮ್ಮೆ ತೂಕ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ ತಾಲೀಮು ರದ್ದು ಮಾಡಿ ಆನೆಗಳ ತೂಕ ಮಾಡಿಸುವ ಪ್ರಕ್ರಿಯೆ ನಡೆಸಿದ್ದಾರೆ. ಅರಣ್ಯಧಿಕಾರಿ ಡಿಸಿಎಫ್ ಡಾ. ಕರಿಕಾಳನ್ ನೇತೃತ್ವದಲ್ಲಿ ತೂಕ ಹಾಕುವ ಪ್ರಕ್ರಿಯೆ ನಡೆದಿದೆ. ಕಳೆದ ಬಾರಿಯು ಹಿರಿಯ ಆನೆಯಾದ ಅರ್ಜುನನ ತೂಕ ಹೆಚ್ಚು ಕಾಣಿಸಿಕೊಂಡಿತ್ತು. ಇಂದು ಹೊಸ ಆನೆಗಳೊಂದಿಗೆ ತೂಕ ಹಾಕುವ ಪ್ರಕ್ರಿಯೆ ನಡೆದಿದೆ. ಇಂದು ಒಟ್ಟು 14ಆನೆಗಳಿಗೂ ತೂಕ ಪರಿಶೀಲನಾ ಪ್ರಕ್ರಿಯೆ ನಡೆದಿದೆ
ಒಂದೇ ತಿಂಗಳಲ್ಲಿ ಮೊದಲ ಹಂತದ 9 ಆನೆಗಳು ತೂಕ ಹೆಚ್ಚಿಸಿಕೊಂಡಿದೆ. ಈಗಲೂ ಅರ್ಜುನನೇ ಬಲಶಾಲಿಯಾಗಿದ್ದಾನೆ. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 4990ಕೆಜಿ ತೂಕ ಹೊಂದಿದ್ದಾನೆ. ಅಭಿಮನ್ಯು ಬಂದಾಗ 4770 ಕೆ ಜಿ ತೂಕವಿದ್ದ. ಚೈತ್ರಾ ಆನೆಯ ತೂಕ 3235ಕೆಜಿ, ಬಂದಾಗ 3050 ಕೆಜಿ ತೂಕವಿತ್ತು. ಭೀಮ 4345 ಕೆ ಜಿ ತೂಕ, ಬಂದಾಗ 3920 ಕೆಜಿ ತೂಕವಿತ್ತು. ಮಹೇಂದ್ರ 4450 ಕೆ ಜಿ ತೂಕ, ಬಂದಾಗ 4250 ಕೆ ಜಿ ತೂಕವಿತ್ತು. ಧನಂಜಯ 4890 ಕೆ ಜಿ ತೂಕ, ಬಂದಾಗ 4810 ಕೆ ಜಿ ತೂಕವಿತ್ತು.ಲಕ್ಷ್ಮಿ 3150 ಕೆ ಜಿ ತೂಕ, ಬಂದಾಗ 2920 ಕೆ ಜಿ ತೂಕವಿತ್ತು. ಕಾವೇರಿ 3245 ಕೆ ಜಿ ತೂಕ, ಬಂದಾಗ 3105 ಕೆ ಜಿ ತೂಕವಿತ್ತು. ಇದನ್ನೂ ಓದಿ : – ಅಪ್ಪು ಅದೊಂದು ಕನಸು ನನಸು ಮಾಡಬೇಕಿತ್ತು – ‘ನಾ ನಿನ್ನ ಮರೆಯಲಾರೆ’ ಸಿನಿಮಾ ನೆನಪಿಸಿಕೊಂಡ ರಮ್ಯಾ
ಅರ್ಜುನ 5885 ಕೆ ಜಿ ತೂಕ,ಬಂದಾಗ 5775 ಕೆ ಜಿ ತೂಕವಿತ್ತು. ಗೋಪಾಲಸ್ವಾಮಿ 5460 ಕೆ ಜಿ ತೂಕ, ಬಂದಾಗ 5140 ಕೆ ಜಿ ತೂಕವಿತ್ತು. ಎರಡನೇ ಹಂತದ ಆನೆಗಳಾದ ವಿಜಯ 2760 ಕೆ ಜಿ ತೂಕ. ಗೋಪಿ 4670 ಕೆ ಜಿ ತೂಕ. ಪಾರ್ಥಸಾರಥಿ 3445 ಕೆ ಜಿ ತೂಕ. ಶ್ರೀರಾಮ 4475 ಕೆ ಜಿ ತೂಕ. ಸುಗ್ರೀವ 4785 ಕೆ ಜಿ ತೂಕ ಹೊಂದಿದೆ ಎಂದು ಡಿಸಿಎಫ್ ಕರಿಕಾಳನ್ ಆನೆಗಳ ತೂಕದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : – ಮೈಸೂರಿನ ಆರ್.ಬಿ.ಐ ಸಂಸ್ಥೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ – ಕೇಂದ್ರೀಯ ವಿದ್ಯಾಲಯ ಶಾಲೆಗೆ ಆನ್ ಲೈನ್ ಕ್ಲಾಸ್