ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನು 1ವರ್ಷ ವಿಸ್ತರಣೆ

ಭಾರತವು ಸಕ್ಕರೆ ( sugar )ರಫ್ತಿನ ಮೇಲಿನ ನಿರ್ಬಂಧಗಳನ್ನು 2023ರ ಅ.31 ರವರೆಗೆ ವಿಸ್ತರಿಸಿದೆ ಎಂದು ಡೈರಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಸೂಚನೆ ನೀಡಿದೆ. ಆರಂಭದಲ್ಲಿ, ಈ ವರ್ಷದ ಜೂನ್ 1 ರಿಂದ ಅಕ್ಟೋಬರ್ 31 ರವರೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಆದರೆ ಸಿಎಕ್ಸ್ಎಲ್ ಹಾಗೂ ಟಿಆರ್ಕ್ಯೂ ಕೋಟಾದ ಅಡಿಯಲ್ಲಿ ಯುರೋಪಿಯನ್ ಯೂನಿಯನ್ಗೆ ಸಕ್ಕರೆಯ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಡಿಜಿಎಫ್ಟಿ ಸೂಚಿಸಿದೆ. ಇನ್ನೆರಡೂ ದಿನಗಳಲ್ಲಿ ರಫ್ತು ನಿರ್ಬಂಧ ಮುಗಿಯುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮತ್ತೆ ತೆಗೆದುಕೊಂಡಿರುವ ಸರ್ಕಾರ ರಫ್ತಿಗೆ ಸಂಬಂಧಿಸಿದ ಇಲಾಖೆಯಿಂದ ಕಡ್ಡಾಯ ಅನುಮತಿಯಂತಹ ಇತರ ಷರತ್ತುಗಳು ಬದಲಾಗದೇ ಉಳಿಯುತ್ತವೆ ಎಂದು ತಿಳಿಸಿದೆ. ಇದನ್ನೂ ಓದಿ : –  ವಿಶ್ವದ ಅತಿ ಎತ್ತರದ 369 ಅಡಿ ಶಿವನ ಪ್ರತಿಮೆ ಲೋಕಾರ್ಪಣೆ

ನಿರ್ಬಂಧವನ್ನು ವಿಧಿಸುವಾಗ ಭಾರತದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯತೆಯಿದೆಯೇ ಎಂಬುದರ ಕುರಿತಾಗಿ ಖಚಿತಪಡಿಸಿಕೊಳ್ಳಲು ಸರ್ಕಾರ ಬಯಸಿದೆ ಮತ್ತು ದೇಶೀಯ ಪೂರೈಕೆಯ ಹಿತಾಸಕ್ತಿಗಳನ್ನು ಕಾಪಾಡಲು ರಫ್ತು ನಿರ್ಬಂಧವನ್ನು ಸಂಪೂರ್ಣವಾಗಿ ವಿಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ : –  ಇಬ್ಬರು ಪತ್ರಕರ್ತರ ಚಿಕಿತ್ಸೆಗೆ ಪರಿಹಾರ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!