ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದೆ. ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್ ಆಗಿದ್ದಾರೆ. ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಆಗಲಿದ್ದಾರೆ.
ಮೇಯರ್ ಸ್ಥಾನಕ್ಕೆ ಬಿಜೆಪಿ (BJP) ಯಿಂದ ಶೋಭಾ ಸೋಮನಾಚೆ (Shobha somanache) ಏಕೈಕ ಅಭ್ಯರ್ಥಿ ನಾಮಪತ್ರ (Nomination) ಸಲ್ಲಿಸಿದ್ದಾರೆ. ಇನ್ನೂ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ರೇಷ್ಮಾ ಪಾಟೀಲ್ ಮತ್ತು ಎಂಇಎಸ್ ನಿಂದ ವೈಶಾಲಿ ಭಾತಖಾಂಡೆ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ (Election) ನಡೆಯಲಿದೆ. ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಲ್ ಅಂಗಡಿ, ಎಂಎಲ್ ಸಿ ಸಾಬಣ್ಣ ತಳವಾರ ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಗೆ ಬಿಜೆಪಿ ನಗರ ಸೇವಕರು ಕೇಸರಿ ಪೇಟಾ ತೊಟ್ಟು ಆಗಮಿಸಿದ್ದಾರೆ. ಇದನ್ನೂ ಓದಿ : – ಅದಾನಿ ವಿರುದ್ಧ ತನಿಖೆಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಚುನಾವಣೆಯಿಂದ ಕಾಂಗ್ರೆಸ್ (Congress) ನಾಯಕರು ದೂರವೇ ಉಳಿದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೈರಾಗಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಉಪಮೇಯರ್ ಹುದ್ದೆಯೂ ಒಲಿಯುವ ಸಾಧ್ಯತೆ ಇದೆ.
ಇದನ್ನೂ ಓದಿ : – ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ