ಟ್ರೈನ್ ಸ್ಟೋಕ್,ಹೃದಯಾಘಾತಕ್ಕೊಳಗಾಗಿದ್ದ ಬೆಂಗಾಳಿ ನಟಿ ಐಂದ್ರಿಲಾ ಶರ್ಮಾ (Aindrila Sharma ) ಇಂದು ಮೃತಪಟ್ಟಿದ್ದಾರೆ.
24 ವರ್ಷದ ಬೆಂಗಾಳಿ ಯುವ ನಟಿ ಐಂದ್ರಿಲಾ ಶರ್ಮಾ ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಸ್ಟೋಕ್ ಸಂಭವಿಸಿದ ಹಿನ್ನೆಲೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಇದನ್ನೂ ಓದಿ :– ಇದು ನಿಜವಾದ ಅಹಿಂದ ಕಾರ್ಯಕ್ರಮ – ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ
ನವೆಂಬರ್ 1 ರಂದು ಚೈನ್ ಸ್ಟೋಕ್ಗೆ ಒಳಗಾಗಿದ್ದ ನಂತರ ನಟಿ ಐಂದ್ರಿಲಾ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಂಟ್ರಾಕ್ರೇನಿಯಲ್ ಹ್ಯಾಮರೇಜ್ ನಿಂದ ಬಳಲುತ್ತಿದ್ದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದುರಾದೃಷ್ಟವಶಾತ್ ನವೆಂಬರ್ 14ರಂದು ಹೃದಯಾಘಾತಕ್ಕೊಳಗಾಗಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಚಿಕಿತ್ಸೆಯಲ್ಲಿದ್ದ ಅವರು ಶನಿವಾರ ಕೊನೆಯುಸಿರೆಳೆದರು.
ಇದನ್ನೂ ಓದಿ :– ನಮ್ಮ ಸಿಎಂಗೆ ಜೋಡಿ ಗುಂಡಿಗೆ ಇದೆ – ಶ್ರೀಕೃಷ್ಣನಂತೆ ಸಿಎಂ ಕೂಡ ಸುದರ್ಶನ ಚಕ್ರ ಬಿಟ್ಟಿದ್ದಾರೆ – ಶ್ರೀರಾಮುಲು