ಜಮ್ಮು ಮತ್ತು ಕಾಶ್ಮೀರ (JAMMU&KASHMIR) ದಲ್ಲಿ ಭದ್ರತಾ ಕಾರಣದಿಂದ ನಿನ್ನೆ ಸ್ಥಗಿತಗೊಂಡಿದ್ದ ರಾಹುಲ್ (RAHUL GANDHI) ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ (BHARATH JODO YATHRE ) ಇಂದು ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಿಂದ ಪುನರಾರಂಭವಾಗಿದೆ.
LIVE: #BharatJodoYatra | Awantipora to Pampore | Pulwama to Srinagar | Jammu and Kashmir https://t.co/xIZUeHRoRd
— Bharat Jodo (@bharatjodo) January 28, 2023
ಇಂದು ಅವಂತಿಪೋರಾ ಮೂಲಕ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಅವರ ಪುತ್ರಿ ಇಲ್ತಿಜಾ ಮುಫ್ತಿಮ ಈ ಯಾತ್ರೆಯಲ್ಲಿ ರಾಹಲ್ ಗಾಂಧಿ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (PRIYANKA GANDHI VADRA) ಕೂಡ ಭಾಗವಹಿಸುವ ಸಾಧ್ಯತೆಯಿದೆ. ಯಾತ್ರೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು,ಅಧಿಕೃತ ವಾಹನಗಳು ಮತ್ತು ವರದಿಗಾರರನ್ನು ಮಾತ್ರ ಸ್ಥಳಕ್ಕೆ ತಲುಪಲು ಅನುಮತಿಸಲಾಗಿದೆ. ಹೆಚ್ಚಿನ ಭದ್ರತಾ ಕ್ರಮಗಳ ಭಾಗವಾಗಿ ರಾಹುಲ್ ಗಾಂಧಿ ಸುತ್ತಲೂ 3 ಹಂತದ ಭದ್ರತೆ ಒದಗಿಸಲಾಗಿದೆ.
ಇದನ್ನು ಓದಿ :- ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ – ಅಮಿತ್ ಶಾ