ಹರಿಯುವ ನೀರಿನಲ್ಲಿ ಹುಚ್ಚು ಸಾಹಸ ಮಾಡಲು ಬೈಕ್ ಸವಾರ ಹೊರಟ್ಟಿದ್ದ ಘಟನೆ ವಿಜಯನಗರ (Vijayanagara) ದ ಹರಪ್ಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ದೊಡ್ಡ ಕೆರೆ ಬಳಿ ನಡೆದಿದೆ. ಕೋಡಿ ಬಿದ್ದು ಹರಿಯುತ್ತಿರುವ ನೀರಿನಲ್ಲಿ ರಸ್ತೆ ದಾಟಲು ಬೈಕ್ ಸವಾರ ಹೋಗಿದ್ದಾನೆ.
ಅರ್ಧಕ್ಕೆ ಹೋಗುತ್ತಿದ್ದಂತೆ ನಿಯಂತ್ರಣ ತಪ್ಪಿ ಕೊಚ್ಚಿಹೋಗುತ್ತಿದ್ದ ಬೈಕ್ ಸವಾರನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೊಚ್ವಿ ಹೋದ ಬೈಕ್ ನ್ನು ಹಗ್ಗದ ಸಹಾಯದಿಂದ ಯುವಕರು ಹೊರ ತೆಗೆದಿದ್ದಾರೆ.
ಚಿಕ್ಕಬಳ್ಳಾಪುರ (Chikkaballapura) ದಲ್ಲಿ ಕೆರೆ ಕೋಡಿ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಗುಡಿಬಂಡೆ ಪಟ್ಟಣಕ್ಕೆ ಜಲದಿಗ್ಬಂಧನವಾಗಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಗುಡಿಬಂಡೆಯ ಅಮಾನಿಬೈರಸಾಗರ ತುಂಬಿ ಹರಿಯುತ್ತಿದೆ. ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕಿಸುವ ಮಾರ್ಗ ಬಂದ್ ಆಗಿದೆ. ಕೆರೆ ಕೋಡಿ ಮೇಲೆ ವಾಹನ (Vehicles) ಗಳು ಸಂಚರಿಸಲಾಗದೆ ಪರದಾಡಿದೆ. ಬಸ್ (Bus) ಗಳು ಕಾರುಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಿದೆ. ಗುಡಿಬಂಡೆಯಿಂದ ಬೇರೆ ಬೇರೆ ಊರುಗಳಿಂದ ತೆರಳಲಾಗದೆ ವಾಹನಸವಾರರು ಪರದಾಡುತ್ತಿದ್ದಾರೆ. ಅಧಿಕಾರಿಗಳು ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ.ಕೆರೆ ಕೋಡಿ ಮೇಲೆ ಸೇತುವೆ ಕಟ್ಟುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ :- ಕೊಪ್ಪಳದಲ್ಲಿ ಬಸ್ ವಿಳಂಬ ಪ್ರಶ್ನಿಸಿದಕ್ಕೆ ಪ್ರಯಾಣಿಕನ ಮೇಲೆ ದರ್ಪ
ಕೊಚ್ಚಿ ಹೋದ ಕಾರು
ತುಮಕೂರು (Tumkuru) ಜಿಲ್ಲೆಯಾದ್ಯಂತ ಭರ್ಜರಿ ಮಳೆ ಹಿನ್ನೆಲೆಯಲ್ಲಿ ಕಾರು ಕೊಚ್ಚಿ ಹೋಗಿದೆ. ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಕೋಡಿ ನೀರು ರಭಸವಾಗಿ ಹರಿಯುತ್ತಿದೆ. ನೀರಿನ ರಭಸ ಹೆಚ್ಚಾಗಿದ್ದರಿಂದ ತುಮಕೂರು ತೋವಿನಕೆರೆ ರಸ್ತೆ ಸಂಪೂರ್ಣ ಬಂದ್ ಆಗಿದೆ. ಏಕಾಏಕಿ ನೀರಿನ ರಭಸ ಹೆಚ್ಚಾಗಿ ನೀರಲ್ಲಿ ಟ್ರೈಬರ್ ಕಾರು ಕೊಚ್ಚಿ ಹೋಗಿದೆ. ಕಾರು ಮಾಲೀಕನನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ :- ಯಡಿಯೂರಪ್ಪ, ನಿರಾಣಿ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣ – ತನಿಖೆಗೆ ಸುಪ್ರೀಂ ಮಧ್ಯಂತರ ತಡೆ