ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಬಿಜೆಪಿ ಸರ್ಕಾರದಿಂದಾಗಿ ನಮಗೆ ತಲೆ ತಗ್ಗಿಸುವಂತಾಗಿದೆ. 40% ಕಮಿಷನ್ ಅದು ಜಗಜ್ಜಾಹೀರಾಗಿದೆ. ಉದ್ಯೋಗ ಕೊಡುವುದರಲ್ಲೂ ಇಂತಹ ಕೆಲಸಕ್ಕೆ ಹೊರಟಿದ್ದಾರೆ.
ಹಿಂದೆಯೂ ಇತ್ತು, ಈಗಲೂ ಇದೆ. ಅಸೆಂಬ್ಲಿಯಲ್ಲಿ ಹೋಂ ಮಿನಿಸ್ಟರ್ ನಾನೇನು ಮಾಡಿಲ್ಲ ಅಂತ ಯಾಕೆ ಹೇಳಿದ್ರು ಮತ್ತೆ ಏಕೆ ಸಿಓಡಿ ತನಿಖೆಗೆ ಮುಂದಾದರು. ಇದಕ್ಕೆ ಹೋಂ ಮಿನಿಸ್ಟರ್ ಅವರೇ ಜವಾಬ್ದಾರಿ ಎಂದಿದ್ದಾರೆ. ಇದನ್ನೂ ಓದಿ :- ಬೆಲ್ಲದ್ ನಿವಾಸಕ್ಕೆ ಸಿಎಂ- ಕುತೂಹಲಕ್ಕೆ ಕಾರಣವಾಯಿತು ಬೊಮ್ಮಾಯಿ ನಡೆ
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ
ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಕಾಂಗ್ರೆಸ್ಸಿಗೂ ಇದಕ್ಕೂ ಏನ್ ಸಂಬಂಧ? ಈ ಹಗರಣವನ್ನು ಹೊರಗಡೆ ತಂದಿದ್ದೇ ಕಾಂಗ್ರೆಸ್. ಕಾನೂನಲ್ಲಿ ಯಾರು ಏನು ತಪ್ಪು ಮಾಡಿದ್ದಾರೆ ತನಿಖೆ ಆಗಬೇಕು. ಗನ್ ಮ್ಯಾನ್ ಇದ್ದ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇದ್ದ, ಮತ್ತೊಬ್ಬ ಇದ್ದ ಅದೆಲ್ಲಾ ಅಲ್ಲ.
ನಿಮ್ಮ ಸರ್ಕಾರದ ಆಡಳಿತದ ವೈಫಲ್ಯಗಳು ಹೊರಬರ್ತಿದೆ. ಕಾನ್ಸಟೇಬಲ್ ಇರ್ಲಿ, ಯಾರೇ ಇರ್ಲಿ, ಕಾಂಗ್ರೆಸ್ ಅಧಿಕಾರದಲ್ಲಿದ್ಯಾ? ಅಧಿಕಾರ ನಡೆಸುತ್ತಿರುವುದು ನೀವು, ನಿಮ್ಮ ಆಫೀಸರ್ಗಳು ನೂರಾರು ಯುವಕರಿಗೆ ಈ ರೀತಿ ಮೋಸ ಮಾಡಿದ್ದೀರಿ ಎಂದು ಬಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ