ಯಡಿಯೂರಪ್ಪ (Yediyurappa) ನವರು ಹಿರಿಯರು, ಅವರಿಗೆ ಒಳ್ಳೆಯದಾಗಲಿ ಅಂತ ಆಶಿಸುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ (MB.Patil) ಹೇಳಿದ್ದಾರೆ. ಸದಾಶಿವನಗರ (Sadhashivanagar) ದಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರಿಗೆ 75 ವರ್ಷವಾದ ಕಾರಣ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದರು.
ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನಮಾನ ಕೊಟ್ಟಿದ್ದಾರೆ. ಅವರು ಮತ್ತೆ ಚುನಾವಣೆಗೆ ನಿಲ್ಲೋದಿಲ್ಲ, ಸಿಎಂ ಆಗುವ ಅವಕಾಶ ಇಲ್ಲ. ಆದರೆ, ಈಗ ಯಡಿಯೂರಪ್ಪ ಮೇಲೆ ವಿಶೇಷ ಪ್ರೀತಿ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹಾಗಾಗಿ ಯಡಿಯೂರಪ್ಪ ಬಗ್ಗೆ ಇನ್ನಿಲ್ಲದ ಪ್ರೀತಿ ಬಂದಿದೆ ಎಂದು ಹೇಳಿದರು. ಸಿದ್ದರಾಮೋತ್ಸವದಿಂದ ಬಿಜೆಪಿ ನೆಲ ಕಚ್ಚಿದೆ. ಐಸಿಯುನಲ್ಲಿ ಬಿಜೆಪಿ ಪಕ್ಷ ಇರುವ ಕಾರಣ ಪ್ರೀತಿ ತೋರಿಸಿದ್ದಾರೆ ಅಷ್ಟೇ. ಮುಂದಿನ ಚುನಾವಣೆಗೆ ಅಸ್ತಿತ್ವ ಉಳಿಸಿಕೊಳ್ಳಲು ನೇಮಕ ಮಾಡಿದ್ದಾರೆ. ನಾನು ಲಿಂಗಾಯತ ಮತ ಸೆಳೆಯಲು ಪ್ರವಾಸ ಮಾಡುತ್ತಿಲ್ಲ. ಇದನ್ನೂ ಓದಿ : – ಭವ್ಯ ಬಂಗಲೆಯಲ್ಲಿ ಈಜು ಕೊಳ ನಿರ್ಮಾಣ – ಮತ್ತೆ ವಿವಾದದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್?
ನಮಗೆ ಎಲ್ಲಾ ಜಾತಿಗಳೂ ಬಹಳ ಮುಖ್ಯ. ಎಲ್ಲಾ ಸಮುದಾಯದ ಮಠಗಳಿಗೂ ಭೇಟಿ ನೀಡುತ್ತಿದ್ದೇನೆ. ಲಿಂಗಾಯತ (Lingayath) ಸಮುದಾಯದ ಜನರು ಅಷ್ಟೇನೂ ಮೂರ್ಖರಲ್ಲ. ಯಡಿಯೂರಪ್ಪ ಬಗ್ಗೆ ಗೌರವ ಇದ್ದಿದ್ರೆ ಸಿಎಂ ಸ್ಥಾನದಿಂದ ಯಾಕೆ ಕೆಳಗೆ ಇಳಿಸಿದರು ಎಂದು ಪ್ರಶ್ನಿಸಿದ್ರು. ಪ್ರೀತಿ ಇದ್ರೆ ಅವರನ್ನ ಸಿಎಂ ಅಂತಾ ಘೋಷಿಸಲಿ ಎಂದು ಬಿಜಿಪಿಗೆ ಎಂ.ಬಿ ಪಾಟೀಲ್ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : – ರಾಯಚೂರು ತೆಲಂಗಾಣಕ್ಕೆ ಸೇರಬೇಕು- ಕಿಡಿ ಹೊತ್ತಿಸಿದ ಸಿಎಂ ಕೆ. ಚಂದ್ರಶೇಖರ್ ರಾವ್