ಜೆಡಿಎಸ್ ಪಕ್ಷ ಮಾಡಿದ ತಪ್ಪಿನಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಬಿಜೆಪಿ (BJP)ಮೇಲೆ ರಾಜ್ಯದ ಜನರಿಗೆ ಸಿಂಪತಿ ಬಂತು ಎಂದು ಶಾಸಕ ಜಮೀರ್ ಅಹಮದ್ (ZAMEER AHMAD KHAN ) ಹೇಳಿದ್ದಾರೆ.
ಕೋಲಾರ (KOLARA) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಗೆ ಮತ ನೀಡಿದರೆ ಬಿಜೆಪಿಗೆ ಮತ ಕೊಟ್ಟಂತೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿದೆ. ನಾವು ಜೆಡಿಎಸ್ ಪಕ್ಷದಲ್ಲಿ ಇದ್ದವರು, ದೇವೇಗೌಡರು ಅಧಿಕಾರದಲ್ಲಿದಾಗ ಜೆಡಿಎಸ್ ಪಕ್ಷ ಬೇರೆ ಇತ್ತು. ಆದರೆ ಕುಮಾರಸ್ವಾಮಿ ಬಂದ ಮೇಲೆ ಜೆಡಿಎಸ್ ಬೇರೆಯಾಗಿದೆ ಎಂದರು. 2006 ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಅಧಿಕಾರ ಮಾಡಿ ಕುಮಾರಸ್ವಾಮಿ, ಬಿಜೆಪಿಗೆ ಅಧಿಕಾರ ಕೊಟ್ಟಿಲ್ಲ. ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. 2018ರಲ್ಲಿ ಜೆಡಿಎಸ್ ಪಕ್ಷಕ್ಕೆ ಕಡಿಮೆ ಸೀಟು ಬಂದರೂ ಕುಮಾರಸ್ವಾಮಿಗೆ ಅಧಿಕಾರ ಕೊಡಲಾಯಿತು. ಇದನ್ನುಓದಿ :- ಸಚಿವ ಸ್ಥಾನ ಸಿಗದಿದ್ದಕ್ಕೆ ರಮೇಶ್ ಜಾರಕಿಹೊಳಿ ಹತಾಶೆಗೊಂಡಿದ್ದಾರೆ – ಡಿ.ಕೆ.ಶಿವಕುಮಾರ್ ವ್ಯಂಗ್ಯ
ಆದರೆ ಅವರು ರಾಜ್ಯದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಹೊಟೇಲ್ ನಲ್ಲಿ ಕಾಲ ಕಳೆದರು. ಇದರಿಂದ ಅವರ ಶಾಸಕರು ಮತ್ತು ಸಚಿವರು ಸರ್ಕಾರವನ್ನು ಬೀಳಿಸಿದರು ಎಂದು ಹೇಳಿದರು. ಸಿದ್ದರಾಮಯ್ಯ ಅವರಿಂದ ಸರ್ಕಾರ ಹೋಗಿಲ್ಲ. ಕುಮಾರಸ್ವಾಮಿಯಿಂದ ಸರ್ಕಾರ ಹೋಗಿದೆ. ಜೆಡಿಎಸ್ ಈ ಬಾರಿಯೂ 37 ಸೀಟು ಬರಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಸಿದ್ದರಾಮಯ್ಯ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಆಗಿದೆ. ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಶಕ್ತಿ ಇವತ್ತು ಗೊತ್ತಾಯ್ತು. ಇಲ್ಲಿ ಜೆಡಿಎಸ್ ಒಮ್ಮೆ ಕಾಂಗ್ರೆಸ್ ಒಮ್ಮೆ ಗೆಲ್ಲುತ್ತಿದ್ದರು, ಆದರೆ ರಮೇಶ್ ಕುಮಾರ್ 2018ರಲ್ಲಿ ಗೆದ್ದಿದ್ದಾರೆ. 2023 ರಲ್ಲಿ ಗೆಲ್ಲಿಸಿ ಹ್ಯಾಟ್ರಿಕ್ ಗೆಲುವು ಆಗಬೇಕು ಎಂದು ತಿಳಿಸಿದ್ರು.
ಇದನ್ನುಓದಿ :- ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದೀವಿ ಅಂತಾರೆ – ಯಾಕೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ – ಡಿ.ಕೆ ಶಿವಕುಮಾರ್