ಬಿಜೆಪಿ ಯುವ ಸಮೂಹಕ್ಕೆ ಉದ್ಯೋಗದ ಬದಲಾಗಿ ಡ್ರಗ್ಸ್ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ( PRIYAKA GANDHI VADRA ) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನಿಲುವುಗಳ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿ ( BJP ) ಪರಿಕಲ್ಪನೆಯನ್ನು ಯಾರೂ ಒಪ್ಪುವುದಿಲ್ಲ. ಹಿಮಾಚಲ ಪ್ರದೇಶದ ಜನರು ತಮ್ಮ ಒಳಿತಿಗಾಗಿ ಸರ್ಕಾರವನ್ನು ಬದಲಾಯಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಉದ್ಯೋಗ ಸೃಷ್ಟಿಸುವ ಭರವಸೆಗಳ ಕುರಿತು ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಉದ್ಯೋಗ ಹಕ್ಕನ್ನು ಬೆಂಬಲಿಸುವ ಕಾಂಗ್ರೆಸ್ ಆಡಳಿತ ರಾಜ್ಯಗಳಾದ ಛತ್ತಿಸ್ ಗಢ ಹಾಗೂ ರಾಜಸ್ಥಾನವನ್ನು ಉದಾಹರಣೆಯಾಗಿ ನೀಡಿದ್ದಾರೆ. ಇದನ್ನೂ ಓದಿ : – ಕಾಂಗ್ರೆಸ್ ಗೆ SC-ST ಮೀಸಲು ಹೆಚ್ಚಳ ಮಾಡಲು ಧಮ್ ಇರಲಿಲ್ವೇ..? – ಸಿಎಂ ಬೊಮ್ಮಾಯಿ ಪ್ರಶ್ನೆ
ಛತ್ತಿಸ್ ಗಢ ದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ಇದೆ. ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅಲ್ಲಿ 5 ಲಕ್ಷ ಉದ್ಯೋಗಗಳನ್ನು ನೀಡಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ 1.3 ಲಕ್ಷ ಉದ್ಯೋಗ ಕಲ್ಪಿಸಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ 63 ಸಾವಿರ ಹುದ್ದೆಗಳು ಖಾಲಿಯಿದ್ದರೂ, ಬಿಜೆಪಿ ಅವುಗಳನ್ನು ಭರ್ತಿ ಮಾಡಿಲ್ಲ. ವಿದ್ಯಾವಂತ ಯುವಕರು, ಶ್ರಮಜೀವಿಗಳು ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ಬಿಜೆಪಿ ಉದ್ಯೋಗದ ಬದಲಿಗೆ ಡ್ರಗ್ಸ್ ನೀಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : – ಆದಿಪುರುಷ್ ಚಿತ್ರತಂಡ ಎಡವಟ್ಟು -`ಆದಿಪುರುಷ್’ ರಿಲೀಸ್ ಡೇಟ್ ಮುಂದಕ್ಕೆ