ಈಶ್ವರಪ್ಪ, ಸಿ.ಟಿ.ರವಿ, ಅರಗ ಜ್ಞಾನೆಂದ್ರ ಇವರಿಗೆಲ್ಲ ತಲೆ ಸರಿ ಇಲ್ಲ ಅನ್ಸುತ್ತೆ. ಬಿಜೆಪಿ ನಾಯಕರಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ ಎಂದು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು ಅರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ಕಿಲ್ಲ.
ಬೆಳಿಗ್ಗೆ ಒಂದು ಸುಳ್ಳು, ಮಧ್ಯಾಹ್ನ ಸುಳ್ಳು, ಸಂಜೆ ಒಂದು ಸುಳ್ಳು ಹೇಳ್ತಾರೆ.ಇವರ ರಕ್ತದಲ್ಲೇ ಸುಳ್ಳು ಹೇಳುವುದು ಕ್ಷಮೆ ಹೇಳುವುದು ಬಂದಿದೆ. ಆದರೆ ಮಂತ್ರಿಯಾದ ಮೇಲೆ ಇವನ್ನೆಲ್ಲಾ ಬಿಡ್ರಿ. 25 ದಂಡಪಿಂಡಗಳನ್ನ ಲೋಕಸಭಾ ಸದಸ್ಯರಾಗಿ ಇಲ್ಲಿಂದ ಗೆಲ್ಲಿಸಿ ಕಳಿಸಿದ್ದಾರೆ.ಕರ್ನಾಟಕದ ಪರ ಧ್ವನಿ ಎತ್ತಲಿ. ಇದನ್ನು ಓದಿ :- ಚಂದ್ರು ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ – ಅರಗ ಜ್ಞಾನೇಂದ್ರ
ಪಾಲಿಸಿ ಮೇಕಿಂಗ್ ಮಾಡಲಿ ಅಂತ ಅಲ್ಲಿಗೆ ಕಳಿಸಲಾಗಿದೆ. ಆದರೆ ಅವರು ಇಲ್ಲಿ ಕೋಮುಗಲಭೆ ಗಲಾಟೆಗಳಿಗೆ ಕುಮ್ಮುಕ್ಕು ಕೊಡೋದನ್ನ ಬಿಡಬೇಕು. ಬಿಜೆಪಿ ಅಂದ್ರೆ ಬೆಲೆ ಏರಿಕೆ ,ನರೇಂದ್ರ ಮೋದಿ ಅಂದ್ರೆ ಬೆಲೆ ಏರಿಕೆ.2014 ರಲ್ಲಿ ಬಿಜೆಪಿ ಎಲ್ಲಾ ಕಡೆ ಕೂಗಿ ಕೂಗಿ ಹೇಳುತ್ತಿತ್ತು. ಮೆಹೆಂಗಾ ಹಿ ಡಯಾನ ಬಂದ್ ಕಿಯಾ ಹೈ ಅಂತ.ಅದೇ ಡಯಾನನ್ನ ಬಿಜೆಪಿ ಡಾರ್ಲಿಂಗ್ ಮಾಡಿಕೊಂಡು ಬೆಡ್ ರೂಮ್ ನಲ್ಲಿ ಮಲಗಿಸಿದ್ದಾರೆ.
ಸಾಮಾನ್ಯ ಜನ್ರು ಹೋಟೆಲ್ ನಲ್ಲಿ ಊಟ ಮಾಡಲು ಆಗುತ್ತಿಲ್ಲ.ಊಟ ನಾವು ತಿಂದ್ರೆ ನಮ್ಮ ಜೊತೆ ಅಮಿತ್ ಶಾ, ನರೆಂದ್ರ ಮೋದಿನೂ ತಿಂತಾರೆ. ಇವರಿಬ್ಬರದೂ ಬಿಲ್ ನಾವೇ ಕಟ್ಟಬೇಕು.ಹಿಜಾಬ್ ಹಲಾಲ್ ಗಳಂಥ ಹೋರಾಟ ನಡೆಸುವವರಿಗೆ ನೇರವಾಗಿ ಬಿಜೆಪಿ ಸಪೋರ್ಟ ಮಾಡ್ತಿದೆ. ಕೇವಲ ಜೈಕಾರ ಹಾಕುವದರಿಂದ ಹೊಟ್ಟೆ ತುಂಬುತ್ತಾ. ಜೈಕಾರ ಹಾಕುವದರಿಂದ ಕೆಲಸ ಸಿಗುತ್ತಾ, ಬೆಲೆ ಏರಿಕೆ ಇಳಿಯುತ್ತಾ. ಬೇರೆ ರಾಜ್ಯಗಳಲ್ಲಿ ನಾವು ಹೋದಾಗ ಕರ್ನಾಟಕ ಕೈಸಾ ಹೈ ಅಂತಾರೆ ಎಂದು ತಿಳಿಸಿದ್ರು.
ಇದನ್ನು ಓದಿ :- ಬಿಟ್ ಕಾಯಿನ್ ಹಗರಣದ ಬಗ್ಗೆ FBI ತನಿಖೆ – ಇದು ನಾಚಿಕೆಗೇಡಿನ ಸಂಗತಿ ಎಂದ ಸಿದ್ದರಾಮಯ್ಯ