ಮಂಡ್ಯ (Mandya) ಜಿಲ್ಲೆಯೂ ಕಾಲಕಾಲಕ್ಕೆ ಹೇಗೆ ಕುಸಿಯುತ್ತಾ ಬಂತು ಗೊತ್ತಿದೆ. ಅತಿ ಹೆಚ್ಚು ಸಾಲ, ಅತಿ ಹೆಚ್ಚು ಆತ್ಮಹತ್ಯೆ ನಡೆಯುವ ಜಿಲ್ಲೆ ಮಂಡ್ಯ. ಅತಿ ಹೆಚ್ಚು ನಾಯಕತ್ವ ಕೊಡುವ ಜಿಲ್ಲೆಯೂ ಇದೆ. ಮಂಡ್ಯದ ಅಭಿವೃದ್ಧಿಗೆ ತ್ಯಾಗ, ತಲೆಯನ್ನೇ ಕೊಡಲು ಸಿದ್ಧರಿದ್ದೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ್ (Ashwath narayan) ಹೇಳಿದ್ದಾರೆ. ಬೆಂಗಳೂರಿನ ನಲ್ಲಿ ಮಾತನಾಡಿದ ಅವರು , ಮೈಶುಗರ್ ಕಾರ್ಖಾನೆಯನ್ನು ಯಾವ ರೀತಿ ಮಾಡಿದರೆಂದು ಗೊತ್ತಿದೆ. ಬೇರೆ ಪಕ್ಷದವರು ತಾವೂ ಕೆಲಸ ಮಾಡಲ್ಲ, ಮಾಡುವವರನ್ನೂ ಬಿಡಲ್ಲ. ಪಾಂಡವಪುರದ ಸಕ್ಕರೆ ಕಾರ್ಖಾನೆ ಏನು ಮಾಡಿದರು ಎಂದು ಗೊತ್ತು. ಇನ್ನೊಬ್ಬರ ರಕ್ತ ಹೀರುವವರನ್ನು ನಾಯಕ ಎಂದು ಕರೆಯುತ್ತೀರಾ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಯಾರ ಮನೆ ಬಾಗಿಲನ್ನೂ ಕೂಡ ಕಾಯಬೇಕಿಲ್ಲ
ಗುಲಾಮಗಿರಿ ಧಿಕ್ಕರಿಸಿ ಬಂದ ಬಹದ್ದೂರ್ ಗಂಡು ನಾರಾಯಣಗೌಡ. ಕಾಂಗ್ರೆಸ್ (Congress) , ಜೆಡಿಎಸ್ (JDS) ಕುಟುಂಬದ ಪಕ್ಷಗಳು. ಬಿಜೆಪಿಯವರು ಯಾರ ಮನೆ ಬಾಗಿಲನ್ನು ಕೂಡ ಕಾಯಬೇಕಿಲ್ಲ. ತುಷ್ಟೀಕರಣ ರಾಜಕಾರಣ ಮಾಡುವ ಪಕ್ಷಗಳಿಗೆ ಪಾಠ ಕಲಿಸಬೇಕು. ಮಂಡ್ಯ ಜಿಲ್ಲೆಯಲ್ಲಿ 7 ಜೆಡಿಎಸ್ ಶಾಸಕರು, MLC, ಸಿಎಂ ಇದ್ದರೂ. ಲೋಕಸಭೆ ಚುನಾವಣೆಯಲ್ಲಿ ಜನರು ಏನು ಮಾಡಿದರೆಂದು ಗೊತ್ತಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದರು. ಇದನ್ನೂ ಓದಿ : – ಮದುವೆ ಡೇಟ್ ಅನೌನ್ಸ್ ಮಾಡಿದ ನಟಿ ಕಿಯಾರಾ ಅಡ್ವಾಣಿ…!
ಒಕ್ಕಲಿಗ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವು ಸಮುದಾಯಗಳ ಬೇಡಿಕೆಯಿದೆ
ಒಕ್ಕಲಿಗ ಮೀಸಲಾತಿ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಒಕ್ಕಲಿಗ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವು ಸಮುದಾಯಗಳ ಬೇಡಿಕೆ ಇದೆ. ಎಲ್ಲರ ಬೇಡಿಕೆಯನ್ನು ಗಮನಕ್ಕೆ ತೆಗೆದುಕೊಂಡು ಕ್ರಮ ವಹಿಸುವ ಕೆಲಸ ಸರ್ಕಾರದಿಂದ ಆಗುತ್ತದೆ. ಇಲ್ಲಿ ನನ್ನ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ಸರ್ಕಾರದಲ್ಲಿ, ಕಾನೂನಿನಲ್ಲಿ ಯಾವ ರೀತಿಯ ಅವಕಾಶಗಳಿವೆ ಎಂಬುದನ್ನು ನೋಡಿ ಕ್ರಮ ವಹಿಸುವ ಕೆಲಸ ಆಗುತ್ತದೆ. ಸರ್ಕಾರದಿಂದ ಜನರ ಭಾವನೆ ಮತ್ತು ಬೇಡಿಕೆಗಳನ್ನು ಏನು ಈಡೇರಿಸಲು ಸಾಧ್ಯವಿದೆಯೋ ಮಾಡೋಣ ಎಂದು ಹೇಳಿದ್ರು.
ಇದನ್ನೂ ಓದಿ : – ವಾಂಟೆಡ್ ಲಿಸ್ಟ್ ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ! – ಟ್ವೀಟ್ ಮೂಲಕ ಬಿಜೆಪಿ ಕಾಳೆಲೆದ ಕಾಂಗ್ರೆಸ್