ಬಿಜೆಪಿ ( bjp ) ಸರಕಾರ ಅತ್ಯಂತ ಭ್ರಷ್ಟ ಸರ್ಕಾರ. ನನ್ನ ಸೇವಾ ಅವಧಿಯಲ್ಲೇ ಇಂತಹ ಸರ್ಕಾರವನ್ನ ನೋಡಿಲ್ಲ ಎಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ( kempanna ) ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಭೇಡಿ ಮಾಡಿ ಬಳಿಕ ಮಾತನಾಡಿದ ಅವರು, ಶೇ.೪೦% ಮಾತ್ರವಲ್ಲ ಕೆಲವು ಕಡೆ ಅದಕ್ಕಿಂತಲೂ ಹೆಚ್ಚು ಕಮೀಷನ್ ಕೇಳುತ್ತಿದ್ದಾರೆ. ಅಧಿಕಾರಿಗಳು ಸಿಎಂ ಮಾತನ್ನು ಕೇಳದ ಸ್ಥಿತಿ ನಿರ್ಮಾಣವಾಗಿದೆ. ನಾವು ಸಾಯೋಕು ಸಿದ್ಧ. ನಮ್ಮಹೋರಾಟ ಮುಂದುವರಿಯಲಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಸಿಎಂ ಹೇಳಿದ್ದರು. ಆದರೆ ಸಿಎಂ ಮಾತೇ ಕೇಳ್ತಾ ಇಲ್ಲ. ನಾವು ಸಿದ್ದರಾಮಯ್ಯ( siddaramaiah ) ಗೆ ಯಾವುದೇ ದಾಖಲೆ ಕೊಟ್ಟಿಲ್ಲ. ದಾಖಲೆಗಳನ್ನ ಕೊಡುವುದು ದೊಡ್ಡದಲ್ಲ. ಕೊಟ್ಟ ಬಳಿಕ ದೊಡ್ಡ ಸಮಸ್ಯೆಗಳು ಆಗುತ್ತೆ. ತನಿಖೆ ಮಾಡಿದಾಗ ದಾಖಲೆ ಕೊಡುತ್ತೇವೆ. ನ್ಯಾಯಾಂಗ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ. ಈಗ ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟಿದೆ. ಕೆಲ ಸಚಿವರು, ಪಿಡಬ್ಲುಡಿ ಸಚಿವರು ನಮ್ಮ ಸಂಘಟನೆ ಒಡೆಯಲು ಪ್ರಯತ್ನ ಮಾಡಿದ್ರು. ೨೨ ಸಾವಿರ ಕೋಟಿ ರೂ ಬಿಲ್ ಬಾಕಿ ಇದೆ. 3 ವರ್ಷಗಳಿಂದ ಬಿಲ್ ಬಾಕಿ ಇದೆ. ಸಿದ್ದರಾಮಯ್ಯಗೆ ಕೆಲವೊಂದು ಮಾಹಿತಿಗಳನ್ನ ನೀಡಿದ್ದೇನೆ. ಸದನದಲ್ಲಿ ಈ ವಿಚಾರವನ್ನ ಪ್ರಸ್ತಾಪಿಸುತ್ತೇನೆ ಎಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಪ್ರಧಾನಿ ನರೇಂದ್ರ ಮೋದಿ ದಿಢೀರ್ ಅಂತ ಮಂಗಳೂರು ಪ್ರವಾಸ ಫಿಕ್ಸ್ ಮಾಡಿದ್ದು ಯಾಕೆ…?
ಸಿಎಂ ಬಸವರಾಜ್ ಬೊಮ್ಮಾಯಿ ( basavaraj bommai ) ಒಳ್ಳೆಯ ಮನುಷ್ಯ. ಸಿಎಂ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ. ಸಿಎಂ ಆದೇಶ ನೀಡಿದರೂ ಹಣ ಬಿಡುಗಡೆ ಆಗುತ್ತಿಲ್ಲ. ಕೋರ್ಟ್ ಗೆ ಹೋಗಿ ಗುತ್ತಿಗೆ ಹಣ ಬಿಡಿಸಿಕೊಂಡಿದ್ದೇವೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಲೆಕ್ಷನ್ ಮಾಡೋಕೆ ಹೇಳಿದ್ದಾರೆ. ಇವರಿಗೆಲ್ಲಾ ನಾಚಿಕೆಯಾಗಬೇಕು. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೀಗೆ ಹೇಳಿದರೆ ಹೇಗೆ.. ? ಇವರಷ್ಟೇ ಅಲ್ಲಾ ಇನ್ನೂ ಹಲವು ಸಚಿವರು ಹೀಗೆ ಮಾಡುತ್ತಿದ್ದಾರೆ. ನಮ್ಮ ಸಂಘದ ಇಬ್ಬರಿಗೆ ತೊಂದರೆ ಕೊಟ್ಟಿದ್ದರು. ನಮ್ಮ ಸಂಘವನ್ನೇ ಒಡೆಯಲು ಮುಂದಾಗಿದ್ದರು. ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇನೆ. ಸ್ವಾತಂತ್ರ್ಯ ದಿನಾಚರಣೆ ದಿನ ಭ್ರಷ್ಟಾಚಾರ ದೇಶಕ್ಕೆ ಮಾರಕವೆಂದು ಭಾಷಣ ಮಾಡಿದ್ದಾರೆ. ಇದನ್ನ ನಾವು ಸ್ವಾಗತಿಸುತ್ತೇವೆ. ಆದರೆ ನಾವು ಕೊಟ್ಟಿದ ದೂರಿನ ಬಗ್ಗೆ ಇನ್ನೂ ಯಾಕೆ ಕ್ರಮಕೈಗೊಂಡಿಲ್ಲ. 15 ದಿನಗಳಲ್ಲಿ ಮೋದಿಗೆ ಮತ್ತೊಮ್ಮೆ ಪತ್ರ ರೆಯುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವ ಸೋನಿಯಾ ಗಾಂಧಿ- ಪ್ರಿಯಾಂಕಾ, ರಾಹುಲ್ ಸಾಥ್!