ತಮಿಳು ನಟ ವಿಕ್ರಮ್ (vikram) ಗೆ ಹೃದಯಾಘಾತವಾಗಿದೆ. ಚೆನ್ನೈನ ಕಾವೇರಿ (kaveri) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ವಿಕ್ರಮ್ ಗೆ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ನಟ ವಿಕ್ರಮ್ ಆರೋಗ್ಯದ ಮೇಲೆ ವೈದ್ಯರು ಹೆಚ್ಚಿನ ನಿಗಾ ವಹಿಸಿದ್ದಾರೆ.
ತಮಿಳಿನಲ್ಲಿ ವಿಶಿಷ್ಟ ನಟ ಎಂದು ಗುರುತಿಸಿಕೊಂಡಿರುವ ನಟ ವಿಕ್ರಮ್ ಗೆ ತಮಿಳು ಹಾಗೂ ತೆಲುಗಿ(telugu) ನಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಒಬ್ಬೊಬ್ಬರಾಗಿ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ವಿಕ್ರಮ್ ಶಂಕರ್ ನಿರ್ದೇಶನದ ‘ಅನ್ನಿಯನ್’ ಸಿನಿಮಾದ ಮೂಲಕ ತೆಲುಗಿನಲ್ಲದೇ ದೇಶಾದ್ಯಂತ ಅಪಾರ ಕ್ರೇಜ್ ಗಳಿಸಿದರು.
ಕಾಲಿವುಡ್ ನಲ್ಲಿ ಮೊದಲಿನಿಂದಲೂ ಸಖತ್ ಫಿಟ್ ಅಂಡ್ ಫೈನ್ ಆಗಿದ್ದವರು ಚಿಯಾನ್ ವಿಕ್ರಮ್. ಇಂದು ಬೆಳಗ್ಗೆ ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಇದ್ದಕಿದ್ದ ಹಾಗೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚೈನ್ನೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಕೂಡ ನೀಡಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸದ್ಯಕ್ಕೆ ವಿಕ್ರಮ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ನುರಿತ ವೈದ್ಯರು ವಿಕ್ರಮ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ : – ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ – ಕೊಲ್ಲುವುದೇ ನನ್ನ ಗುರಿಯಾಗಿತ್ತು ಎಂದ ಹಂತಕ
ಸಂಜೆ ರಿಲೀಸ್ ಆಗಬೇಕಿದ್ದ ಸಿನಿಮಾದ ಟೀಸರ್ !
ಇಂದು ಸಂಜೆ 6 ಗಂಟೆಗೆ ವಿಕ್ರಂ ತಮ್ಮ ಚಿತ್ರ ಪೊನ್ನಿಯಿನ್ ಸೆಲ್ವನ್ ನ ಟ್ರೇಲರ್ ಲಾಂಚ್ ಮಾಡಬೇಕಿತ್ತು.ವಿಕ್ರಮ್ ಅನ್ನಿಯನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವರು ತಮಿಳು ಚಿತ್ರಗಳ ಜೊತೆಯಲ್ಲೇ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ವಿಕ್ರಮ್ ಹಾಗೂ ಅವರ ಕಿರಿಯ ಪುತ್ರ ಮೊಟ್ಟ ಮೊದಲ ಬಾರಿಗೆ ನಟಿಸಿದ್ದ ಮಹಾನ್ ಸಿನಿಮಾ ಸಖತ್ ಸೌಂಡ್ ಮಾಡಿತ್ತು.
ಇದನ್ನೂ ಓದಿ : – ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಆರೋಗ್ಯ ಸ್ಥಿತಿ ಗಂಭೀರ