ರಾಷ್ಟ್ರ ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಇದೀಗ ಇಡೀ ದೇಶದ ಗಮನ ಸೆಳೆದಿದೆ. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಉತ್ತರ ದೆಹಲಿ ಪಾಲಿಕೆ ಚಾಲನೆ ನೀಡಿದ್ದು, ಈ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಈ ಮಧ್ಯೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವಿರೋಧಿಸಿ ಸಿಪಿಎಂ ಪಾಲಿಟ್ ಬ್ಯುರೋ ನಾಯಕಿ ಬೃಂದಾ ಕಾರಟ್ ಪ್ರತಿಭಟನೆ ನಡೆಸಿದ್ದು, ಅಕ್ರಮ ಕಟ್ಟಡಗಳನ್ನು ತೆರವು ಮಾಡಿಸಲು ಬಂದಿದ್ದ ಜೆಸಿಬಿ ಯಂತ್ರದ ಮುಂದೆ ನಿಂತು ಸುಪ್ರೀಂಕೋರ್ಟ್ ಆದೇಶದ ಪ್ರತಿ ತೋರಿಸಿದ್ದಾರೆ. ಇದನ್ನೂ ಓದಿ :- ನಾಳೆ 9-30ಕ್ಕೆ ಕೆಂಪುಕೋಟೆಯಿಂದ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಭಾಷಣ!
ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾದ ಜೆಸಿಬಿ ಯಂತ್ರದ ಮುಂದೆ ನಿಂತ ಬೃಂದಾ ಕಾರಟ್, ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ತೋರಿಸಿದರು. ಬೃಂದಾ ಕಾರಟ್ ಅವರೊಂದಿಗೆ ಜಹಾಂಗೀರ್‌ಪುರಿಯ ಸ್ಥಳೀಯರೂ ಕೂಡ ಜೆಸಿಬಿಯ ಯಂತ್ರಕ್ಕೆ ಅಡ್ಡಲಾಗಿ ನಿಂತಿದ್ರು.
ಇದನ್ನೂ ಓದಿ :- ಪಿಎಸ್ಐ ಕೇಸ್- ಅಭ್ಯರ್ಥಿಗಳ ವಿಚಾರಣೆ