ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Niramala seethraman) ತಮ್ಮ ಬಜೆಟ್ (Budget) ನಲ್ಲಿ ರೈಲ್ವೆ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ದಾರೆರೆ. 2.4 ಲಕ್ಷ ಕೋಟಿ ರೂಪಾಯಿಯನ್ನ ರೈಲ್ವೆ (Railway) ಗೆ ನೀಡಲಾಗಿದೆ. ಇದು ರೈಲ್ವೆ ಇಲಾಖೆಗೆ ತನ್ನ ಇತಿಹಾಸದಲ್ಲೇ ಸಿಕ್ಕಿದ ಗರಿಷ್ಠ ಮೊತ್ತವಾಗಿದೆ.
2013-14ರ ಬಜೆಟ್ ನಲ್ಲಿ ಕೊಡಲಾಗಿದ್ದಕ್ಕಿಂತ 9 ಪಟ್ಟು ಹೆಚ್ಚು ಮೊತ್ತವನ್ನು ಈ ಬಾರಿ ಕೊಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರಾದೇಶಿಕ ಸಂಪರ್ಕತೆ ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು ಬಲಗೊಳಿಸಲು ಒತ್ತು ಕೊಡಲಾಗುತ್ತಿದೆ. ರೈಲ್ವೆಗೆ ಸಿಕ್ಕಿರುವ 2.4 ಲಕ್ಷ ರೂ ಹಣದಲ್ಲಿ 75 ಸಾವಿರ ಕೋಟಿ ರೂ ಹಣವನ್ನು ಸರಕು ಸಾಗಣೆ ವ್ಯವಸ್ಥೆ ಸುಧಾರಣೆಗೆ ಕೊಡಲಾಗಿದೆ. ಈ ಕ್ರಮದಿಂದ ರೈಲ್ವೆ ಇಲಾಖೆಗೆ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಬಜೆಟ್ ನಲ್ಲಿ ವಂದೇ ಭಾರತ್ (Vande bharath) ರೈಲುಗಳ ಮೇಲೆ ಗಮನ ಕೊಡುವ ಸಾಧ್ಯತೆ ಇದೆ. ಈ ವರ್ಷದ ಆಗಸ್ಟ್ ತಿಂಗಳೊಳಗೆ 75 ವಂದೇ ಭಾರತ್ ರೈಲುಗಳನ್ನು ಬಿಡಲು ರೈಲ್ವೆ ಇಲಾಖೆ ಯೋಜಿಸಿದೆ.
ಇದನ್ನು ಓದಿ :- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ ಸಿಎಂ