ಮೈಸೂರಿನಲ್ಲಿ (Mysuru) ಕಲಾವಿದ ನಂದನ್ (Nandan) ಎಂಬುವರು ತಮ್ಮ ಕೈಚಳಕದಲ್ಲಿ ಪೇಟವನ್ನು ಸಿದ್ಧಪಡಿಸಿದ್ದಾರೆ. ಮೈಸೂರು ಮಹಾರಾಜರಂತೆ ಮೋದಿಗೆ ಕೆಂಪು ಪೇಟ ತೊಡಿಸಲು ತಯಾರಿ ನಡೆದಿದೆ. ಮೈಸೂರಿನ ನಂದನ್ , ರೇಷ್ಮೆ ನೂಲುಗಳಿಂದ ಮೈಸೂರು ಪೇಟ ತಯಾರಿಸಿದ್ದಾರೆ.
ಕೆಂಪು ಹಾಗೂ ಗೋಲ್ಡ್ ಕಲರ್ (Red and gold colour) ಮೈಸೂರು ಸಾಂಪ್ರದಾಯಿಕ ಶೈಲಿಯ ಪೇಟವನ್ನು , ಇಂದು ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿಗೆ ಪೇಟವನ್ನು (Mysuru peta) ಧಾರಣೆ ಮಾಡಲಿದ್ದಾರೆ.
ಊಟದ ಮೆನು ರೆಡಿ
ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ (Modi) ಊಟದ ಮೆನು ರೆಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಗಾಗಿ ಶುದ್ದ ಸಸ್ಯಹಾರಿ ಊಟ ಉಣ ಬಡಿಸಲಾಗುತ್ತೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬರ್, ಬ್ರೆಡ್ ಬಟರ್, ಮಿಕ್ಸ್ ಫ್ರೂಟ್ ಇರಲಿದೆ. ಮಧ್ಯಾಹ್ನದ ಊಟಕ್ಕೆ ವೆಜಿಟೇಬಲ್ ಸೂಪ್, ಮಸಾಲ ಮಜ್ಜಿಗೆ ರೋಟಿ, ಜೀರಾ ರೈಸ್, ದಾಲ್ ಹಾಗೂ ಮಿಕ್ಸ್ ಫ್ರೂಟ್ ಒಳಗೊಂಡಿದೆ. ರಾತ್ರಿಯ ಊಟಕ್ಕೆ ಕಿಚಡಿ/ ಗುಜರಾತಿ ಕರಿ, ರೋಟಿ, ದಾಲ್, ರೈಸ್,
ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ಒಳಗೊಂಡಿದೆ. ಇದನ್ನೂ ಓದಿ : – ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ – IISC ಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ
ಹೊಟೇಲ್ ಗೆ ಬಿಗಿ ಭದ್ರತೆ
ಮೈಸೂರಿನ ಮೃಗಾಲಯ ಸಮೀಪ ಇರುವ ಹೋಟೆಲ್ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ (Radisson blu hotel) ಹೈ ಅಲರ್ಟ್ ಘೋಷಿಸಲಾಗಿದೆ. ಪೊಲೀಸರು ಹಾಗೂ ಎಸ್ಪಿಜಿ ತಂಡದಿಂದ ತಪಾಸಣೆ ನಡೆದಿದೆ. ಇದನ್ನೂ ಓದಿ : – ಬೆಂಗಳೂರು ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧ – ಬೆಂಗಳೂರಿನ ಯುವಶಕ್ತಿಯನ್ನ ಕೊಂಡಾಡಿದ ಪ್ರಧಾನಿ ಮೋದಿ