ಚಂದ್ರು ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಸಿಎಂ ಜೊತೆ ಚರ್ಚೆ ನಡೆಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎಲ್ಲ ಆಯಾಮಗಳಲ್ಲಿ ತನಿಖೆಗೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಚಂದ್ರುವನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ನಮ್ಮ ಪೊಲೀಸ್ ವಿಭಾಗದ ಮೇಲೆ ನಂಬಿಕೆ ಅಪನಂಬಿಕೆ ವಿಚಾರ ಇಲ್ಲಿ ಬರಲ್ಲ. ಇದನ್ನು ಓದಿ :- ಚಂದ್ರು ಕೊಲೆಗೆ ಟ್ವಿಸ್ಟ್ – ಕಮಿಷನರ್ ಕಮಲ್ ಪಂತ್ ಗೆ ಬುಲಾವ್ ನೀಡಿದ ಸಿಎಂ
ಸಿಐಡಿಯೂ ನಮ್ಮದೇ ಪೊಲೀಸರ ಇನ್ನೊಂದು ವಿಭಾಗ. ಪೊಲೀಸರು ಅಸಮರ್ಥರಲ್ಲ, ಗೃಹ ಸಚಿವರೂ ಅಸಮರ್ಥರಲ್ಲ. ನಮಗೆ ಸಾಮರ್ಥ್ಯ ಇದೆ. ಸೂಕ್ತ ತನಿಖೆ ನಡೆಸ್ತೇವೆ. ಗೊಂದಲವನ್ನು ನಾನು ಇನ್ನಷ್ಟು ವಿವಾದ ಮಾಡಲ್ಲ. ರೆಗ್ಯುಲರ್ ಪೊಲೀಸರು ಬ್ಯುಸಿ ಇರ್ತಾರೆ. ಸಿಐಡಿಯವ್ರು ಒಂದೊಂದೇ ನಿರ್ದಿಷ್ಟ ಕೇಸ್ ಗಳು ತನಿಖೆ ಮಾಡ್ತಾರೆ. ಸಿಐಡಿಯಲ್ಲೂ ಇರೋರು ಪೊಲೀಸರೇ ಎಂದು ಹೇಳಿದ್ರು.
ಇದನ್ನು ಓದಿ :- ಬಿಟ್ ಕಾಯಿನ್ ಹಗರಣದ ಬಗ್ಗೆ FBI ತನಿಖೆ – ಇದು ನಾಚಿಕೆಗೇಡಿನ ಸಂಗತಿ ಎಂದ ಸಿದ್ದರಾಮಯ್ಯ