ಪುಜಾಪುಭುತ್ವ ದೇಶವಾಗಿರುವ ತೈವಾನ್ ಸದಾ ಚೀನಾ ದಾಳಿಯ ಭೀತಿಯಲ್ಲಿಯೇ ಬದುಕುತ್ತಿದೆ. ತೈವಾನ್ ಅನ್ನು ಚೀನಾ ತನ್ನ ಅಂಗ ಎಂದೇ ಭಾವಿಸಿದ್ದು, ಒಂದಲ್ಲಾ ಒಂದು ದಿನ ಅದನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ.
ಈ ನಡುವೆ ಚೀನಾ ತೈವಾನ್ ವಾಯು ಪ್ರದೇಶದಲ್ಲಿ 30 ಯುದ್ಧ ವಿಮಾನಗಳ ಹಾರಾಟ ನಡೆಸಿದೆ. ಈ ಮೂಲಕ ತೈವಾನ್ ನ ರಕ್ಷಣಾ ದೌರ್ಬಲ್ಯವನ್ನ ಪರಿಶೀಲಿಸುತ್ತಿದೆ. ಉಕ್ರೇನ್ ಹದ್ದುಬಸ್ತಿನಲ್ಲಿಡಲು ರಷ್ಯಾ ತೆಗೆದುಕೊಳ್ಳುತ್ತಿರುವ ಕ್ರಮಗಳ ಮಾದರಿಯಲ್ಲಿಯೇ ತೈವಾನ್ ವಿಚಾರದಲ್ಲಿ ವರ್ತಿಸಲು ಚೀನಾ ಮುಂದಾಗಿದೆ. ಇದನ್ನೂ ಓದಿ : – ಉಕ್ರೇನ್ ರಕ್ಷಣಾ, ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬಿಡೆನ್
ತೈವಾನ್ನ ಸುತ್ತಮುತ್ತಲೂ ಮಿಲಿಟರಿ ಚಟುವಟಿಕೆ ಹೆಚ್ಚಿಸಿದೆ. ತೈವಾನ್ನ ಭೂ ಪುದೇಶದ ಮಾದರಿಯನ್ನ ಮರುಸೃಷ್ಟಿಸಿ ಹಲವು ಬಾರಿ ಚೀನಾ ಸೇನೆಯು ಅಣಕು ದಾಳಿಯ ಕಾರ್ಯಾಚರಣೆ ನಡೆಸಿದೆ. ಇದರಿಂದ ವಿಶ್ವದಲ್ಲಿ ಇನ್ನೊಂದು ಯುದ್ಧ ಭೀತಿ ಎದುರಾಗಿದೆ.
ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!