ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM BASAVARAJ BOMMAI) ಟ್ವಿಟರ್ ಖಾತೆಯನ್ನೇ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಬೆಳಗ್ಗೆ 6.15 ರಿಂದ 6.19ರ ವರೆಗೂ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಈ ಸಮಯದಲ್ಲಿ 50 ಪೋಸ್ಟ್ ಗಳನ್ನು ಕಿಡಿಗೇಡಿಗಳು ಪಿನ್ ಮಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM BASAVARAJ BOMMAI) ಟ್ವಿಟರ್ ಖಾತೆಯನ್ನೇ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಬೆಳಗ್ಗೆ 6.15 ರಿಂದ 6.19ರ ವರೆಗೂ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಈ ಸಮಯದಲ್ಲಿ 50 ಪೋಸ್ಟ್ಗಳನ್ನು ಕಿಡಿಗೇಡಿಗಳು ಪಿನ್ ಮಾಡಿದ್ದಾರೆ. , ಈ ಕುರಿತು ಸಿಎಂ ಕಚೇರಿ ಯಾವುದೇ ದೂರು ನೀಡಿಲ್ಲ. ಸಿಎಂ ಆಫ್ ಕರ್ನಾಟಕ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಪೋಸ್ಟ್ ಪಿನ್ ಮಾಡುವಾಗ ಆಡ್ಮಿನ್ಗೆ ಮೆಸೇಜ್ ಹೋಗಿದ್ದು ಆಡ್ಮಿನ್ ನಂತರ ಸಿಎಂ ಖಾತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಹ್ಯಾಕ್ ಆಗಿರುವುದು CM of Karnataka ಎಂಬ ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj S Bommai ) ಎಂಬ ವೈಯಕ್ತಿಕ ಟ್ವಿಟರ್ ಖಾತೆಯನ್ನು ಪ್ರತ್ಯೇಕವಾಗಿ ಹೊಂದಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ(KARNATKA CM )ಯ ಅಧಿಕೃತ ಟ್ವಿಟರ್ ಖಾತೆಯೇ ಹ್ಯಾಕ್ ಆಗಿರುವುದು ಅಚ್ಚರಿ ಮೂಡಿಸಿದೆ. ಸಿಎಂ ಆಫ್ ಕರ್ನಾಟಕ ಎಂಬ ಮುಖ್ಯಮಂತ್ರಿಯ ಅಧಿಕೃತ ಖಾತೆಯನ್ನು ಕರ್ನಾಟಕದ ಮುಖ್ಯಮಂತ್ರಿ ಆದವರು ಬಳಸುತ್ತಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS YADIYURAPPA) ಪ್ರೊಫೈಲ್ ಚಿತ್ರದೊಂದಿಗೆ ಆ ಖಾತೆ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಮುಖ್ಯಮಂತ್ರಿ ಆಗಿರುವ ಬೊಮ್ಮಾಯಿ ಖಾತೆ ಇದಾಗಿದೆ.
ಇದನ್ನು ಓದಿ :- ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಕ್ರಾಂತಿ – ಸಿಎಂ ಬೊಮ್ಮಾಯಿ