ಮೇಕೆದಾಟು ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳ, ಇದು ಇವತ್ತಿನದಲ್ಲ ಬಂದಾಗಿಂದಲೂ ಕಾವೇರಿಯಿಂದ ರಾಜಕೀಯ ಮಾಡುತ್ತಾ ಬರ್ತಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಟ್ರಿಬ್ಯುನಲ್ ಅದೇಶವಾಗಿದೆ. ನೀರು ಕೊಡಲು ಕಾವೇರಿ ನಿಗಮ ಮಂಡಳಿ ಬೋರ್ಡ್ ಇದ್ದು ನೀರು ಹಂಚಿಕೆ ಆಗ್ತಿದೆ. ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಹಾಕಿಕೊಂಡಿದ್ದೇವೆ, ಹೀಗಿದ್ದರೂ ಕುಡಿಯುವ ನೀರಿನ ಯೋಜನೆಗೆ ತಕರಾರು ಮಾಡುತ್ತಿದ್ದಾರೆ. NGT ನಮ್ಮ ಪರವಾಗಿ ಆದೇಶ ಕೊಟ್ಟಿದೆ, ಅದರ ವಿರುದ್ಧವೂ ತಮಿಳುನಾಡು ಸುಪ್ರೀಂಕೋರ್ಟ್ ಗೆ ಹೋಗಿದ್ದಾರೆ. ಮೊನ್ನೆ ನಾವು ಸರ್ವಪಕ್ಷ ಸಭೆ ಮಾಡಿದ್ದೇವೆ ಯೋಜನೆ ಜಾರಿಯ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ ಅವರು ತಗೆದುಕೊಂಡ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ, ಕಾನೂನು ಪ್ರಕಾರವಿಲ್ಲ..ಇದು ಬರೀ ರಾಜಕೀಯ ಸ್ಟೆಂಟ್ ಎಂದು ಸಿಎಂ ಹೇಳಿದ್ದಾರೆ.
0 111 Less than a minute