ಕೋರಮಂಗಲದ ಕೆಎಸ್ ಆರ್ ಪಿ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ನಂತರ ಮಾತನಾಡಿದ ಸಿಎಂ, ಬೇರೆ ಇಲಾಖೆ ಸಿಬ್ಬಂದಿಗೂ ಪೊಲೀಸ್ ಇಲಾಖೆಗೂ ಬಹಳಷ್ಟು ವ್ಯತ್ಯಾಸವಿದೆ.
ನಾಡಿನ ಜನರ ಮತ್ತು ಸಮಾಜದಲ್ಲಿ ಕಾನೂನು, ಶಾಂತಿ ಕಾಪಾಡುವುದು ಪೊಲೀಸರ ಕರ್ತವ್ಯ. ಇಲಾಖೆಯಲ್ಲಿ ದಕ್ಷತೆ ಹಾಗೂ ನಿಷ್ಠೆ ಬಹಳ ಮುಖ್ಯ. ದೇಶದಲ್ಲೇ ಉನ್ನತ ಸ್ಥಾನದಲ್ಲಿ ಕರ್ನಾಟಕ ಪೊಲೀಸ್ ಇದ್ದಾರೆ ಎಂದು ಹೇಳದರು. ತಮ್ಮ ಕರ್ತವ್ಯ ಮಾಡುವಾಗ ನಿಷ್ಪಕ್ಷಪಾತ ಹಾಗೂ ಮಾತವೀಯತೆಯಿಂದ ಕೆಲಸ ಮಾಡುವುದು ಅಗತ್ಯ ಇದೆ. ನ್ಯಾಯ ನಿಷ್ಠೂರವಾಗಿ ಕೆಲಸ ಮಾಡಬೇಕು.
ಪೊಲೀಸ್ ಇಂಟಲಿಜೆನ್ಸ್ ನ ಹೊಸ ತಂತ್ರಜ್ಞಾನ ಹಾಗೂ ಸಿಬ್ಬಂದಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುಗುತ್ತದೆ. ಪೊಲೀಸರ ಗೃಹಕ್ಕೆ 10 ಸಾವಿರಕ್ಕೂ ಹೆಚ್ಚು ಮನೆಗಳ ಕಟ್ಟಲು ಅನುಮತಿ ಕೊಟ್ಟಿದ್ದೇವೆ ಹೇಳಿದ್ರು. ಕಾರ್ಯಕ್ರಮದಲ್ಲಿ ರಾಜ್ಯದ 135 ಪೊಲೀಸರಿಗೆ ಸಿಎಂ ಪದಕ ಪ್ರದಾನ ಮಾಡಿದ್ರು. ಈ ವೇಳೆ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಉಪಸ್ಥಿತರಿದ್ರು.
ಇದನ್ನು ಓದಿ :- ಹಲಾಲ್- ಜಟ್ಕಾ ವಿವಾದದ ನಡುವೆ ಪಶುಸಂಗೋಪನಾ ಇಲಾಖೆ ಮಹತ್ವದ ಆದೇಶ