ಬೆಳಗಾವಿ (Belagavi) ಸುವರ್ಣ ಸೌಧ (Suvarna soudha) ದಲ್ಲಿ ಚಳಿಗಾಲದ ಅಧಿವೇಶನ (Session) ನಡೆಯುತ್ತಿದ್ದು, ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) 2022-23ರನೇ ಸಾಲಿನ ಪೂರಕ ಬಜೆಟ್ ಮಂಡಿಸಿದ್ದಾರೆ. 8001.13 ಕೋಟಿ ರೂ.ಗಳ ಪೂರಕ ಅಂದಾಜು ಮಂಡಿಸಿದ್ದಾರೆ.
ಕೆಲವೇ ದಿನಗಳಲ್ಲಿ ರಾಜ್ಯ ಅಸೆಂಬ್ಲಿ ಚುನಾವಣೆ ಇದ್ದು ಸಿಎಂ ಬಸವರಾಜ ಬೊಮ್ಮಾಯಿ ಫೆಬ್ರವರಿಯಲ್ಲಿ ತಾತ್ಕಾಲಿಕ ಬಜೆಟ್ ಮಂಡಿಸಲಿದ್ದಾರೆ. ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ಗೆ 1,396 ಕೋಟಿ ರೂ. ಮೀಸಲು, ಮನ್ರೇಗಾ ಯೋಜನೆಗೆ 750 ಕೋಟಿ ರೂಪಾಯಿ ಮೀಸಲು, ಇಂಧನ (Fuel) ಸೆಕ್ಟರ್ನಲ್ಲಿ ಈಕ್ವಿಟಿ ಖರೀದಿಗೆ 500 ಕೋಟಿ ರೂ, ಜನರಲ್ ಅಸೆಂಬ್ಲಿ ಚುನಾವಣೆಗೆ 300 ಕೋಟಿ ರೂಪಾಯಿ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಸ್ಕೀಂಗೆ 256 ಕೋಟಿ ರೂ, ರೈಲ್ವೆ ಯೋಜನೆಗೆ 250 ಕೋಟಿ, ನೀರಾವರಿ ಯೋಜನೆಗೆ 200 ಕೋಟಿ, ಐದು ಮೆಗಾ ಹಾಸ್ಟೆಲ್ಗಳ ನಿರ್ಮಾಣಕ್ಕೆ 200 ಕೋಟಿ ರೂ ಹಾಗೂ ಬಿಬಿಎಂಪಿಗೆ ಎರಡು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಇದನ್ನು ಓದಿ : – ಸಾಹಿತ್ಯ ಸಮ್ಮೇಳನದಲ್ಲಿ ನಿರ್ಲಕ್ಷ್ಯ ಹಿನ್ನೆಲೆ – ಮಹೇಶ್ ಜೋಶಿ ತರಾಟೆಗೆ ತೆಗೆದುಕೊಂಡ ದಲಿತ ಮುಖಂಡರು