ಶಿಗ್ಗಾಂವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಹಾವೇರಿ ( HAVERI ) ಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಚುರುಕಾಗಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( BASAVARJ BOMMAI ) ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಹಾವೇರಿ ( HAVERI ) ಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಚುರುಕಾಗಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( BASAVARJ BOMMAI ) ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮರಾಠ ಭವನದ ಶಂಕುಸ್ಥಾಪನೆಯನ್ನೂ ಮುಖ್ಯಮಂತ್ರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಸುಂದರವಾಗಿರುವ ಸಮುದಾಯ ಭವನ ಇಲ್ಲಿ ನಿರ್ಮಾಣವಾಗಲಿದೆ. ಸಮಾಜದ ಎಲ್ಲ ಮುಖಂಡರಿಗೂ ಶುಭಾಶಯ ಹೇಳುವೆ. ನಾವು ನಿಮ್ಮ ಜೊತೆ ಅಣ್ಣತಮ್ಮಂದಿರ ಥರ ಇರುತ್ತೇವೆ. ಪರಸ್ಪರ ಸಹಾಯ, ಸಹಕಾರದಿಂದ ಇದ್ದಾಗ ಮಾತ್ರ ಈ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಸಮಾಜ ಅಂದರೆ ಇದು ಒಂದು ಜಾತಿಗೆ ಸೀಮಿತ ಅಲ್ಲ. ವಿವಿಧ ಸಮುದಾಯಗಳು ಸೇರಿ ಒಂದು ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ( KARNATAKA ) ದಲ್ಲಿ ಕನ್ನಡ ಪ್ರೀತಿ ಇರಬೇಕು. ಕರ್ನಾಟಕದ ಒಳನಾಡು ಇರಲಿ ಅಥವಾ ಗಡಿ ಭಾಗವೇ ಇರಲಿ, ಎಲ್ಲೆಡೆ ಕನ್ನಡದ ಕಂಪು ಹರಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನವು ಇತರೆಲ್ಲ ಸಮ್ಮೇಳನಗಳಿಗಿಂತಲೂ ಉತ್ಕೃಷ್ಟವಾಗಿ ನಡೆಯಲಿದೆ. ಕನ್ನಡವು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ಹಲವು ಶತಮಾನಗಳ ಇತಿಹಾಸದಲ್ಲಿ ಏನೆಲ್ಲಾ ಬದಲಾವಣೆಗಳು ಕಂಡುಬಂದರೂ ಕನ್ನಡವು ಇಂದಿಗೂ ಗಟ್ಟಿಯಾಗಿಯೇ ನಿಂತಿದೆ ಎಂದು ಹೇಳಿದರು. ಕನ್ನಡವನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಇದು ಗಂಧದಗುಡಿ, ಚಿನ್ನದ ನಾಡು, ಸಾಹಿತ್ಯದ ಬೀಡು, ಸಾಂಸ್ಕೃತಿಕ ನೆಲೆ, ರಾಜ ಮಹಾರಾಜರ ಗತ ವೈಭವದ ಶ್ರೀಮಂತ ನಾಡು ನಮ್ಮದು. ನಾಡಿನ ಇವತ್ತಿನ ಸವಾಲುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ಆಗಲಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದ್ರು.  ಇದನ್ನು ಓದಿ :- ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್ ಶಾ ಸಮಾವೇಶ…!

ಶಿವಾಜಿ ( SHIVAJI ) ಮಹಾರಾಜರು ಇಡೀ ದೇಶಕ್ಕೆ ಸೇರಿದವರು. ಮರಾಠ ಸಮುದಾಯ ಭವನ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ. ಸಂವಿಧಾನವು ಎಲ್ಲರಿಗೂ ಅವಕಾಶ ಕೊಟ್ಟಿದೆ. ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ನಾವು ಸದಾ ನೆನಪಿಡಬೇಕು. ಕೇವಲ ಬಿಲ್ಡಿಂಗ್ ಕಟ್ಟುವುದರಿಂದ ದೇಶ ಕಟ್ಟಿದ ಹಾಗೆ ಆಗುವುದಿಲ್ಲ. ವ್ಯಕ್ತಿಗಳ ಚಾರಿತ್ರ್ಯ, ಸಂಸ್ಕಾರ, ಸಂಸ್ಕೃತಿಗಳಿಂದಲೇ ದೇಶ ರೂಪುಗೊಳ್ಳುತ್ತದೆ. ಕರ್ನಾಟಕದಲ್ಲಿ ಎಲ್ಲ ಭಾಷೆಯವರೂ ಅನ್ಯೋನ್ಯವಾಗಿದ್ದಾರೆ ಎಂದು ಹೇಳಿದ್ರು.

ಇದನ್ನು ಓದಿ :-  ಸಿಎಂ ಬೊಮ್ಮಾಯಿ ನಿವಾಸಕ್ಕೆ ಕೇಂದ್ರ ಸಚಿವ ಜೋಶಿ ಭೇಟಿ…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!