ಮುಖ್ಯಮಂತ್ರಿ ಬೊಮ್ಮಾಯಿ ( BASAVARJ BOMMAI ) ಇಂದು ದೆಹಲಿಗೆ ಪ್ರಯಾಣಿಸಿ ಹೈಕಮಾಂಡ್ ನಾಯಕರ ಜೊತೆ 3 ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಮರಳಿ ಸಚಿವ ಸ್ಥಾನ ಕೊಡಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿಲುವು ಕೇಳಲಿದ್ದಾರೆ.
ಇದರ ಜೊತೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಸಿಎಂ ವಿವರ ನೀಡಲಿದ್ದಾರೆ.ಈಶ್ವರಪ್ಪ ( ESWARAPPA ) ಬಿಜೆಪಿಯ ಹಿರಿಯ ನಾಯಕ ಶಿವಮೊಗ್ಗದಲ್ಲಿ ಪ್ರಭಾವಿ ಹೊಂದಿದ್ದಾರೆ. ರಮೇಶ್ ಜಾರಕಿಹೊಳಿ ಬೆಳಗಾವಿ ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಈಶ್ವರಪ್ಪ ಕೆಲ ದಿನಗಳಿಂದ ಮಂತ್ರಿ ಸ್ಥಾನ ನೀಡದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ್ ನಡೆ ಏನು ಎನ್ನುವ ಕೂತೂಹಲ ಮೂಡಿದೆ.
ಇದನ್ನು ಓದಿ : – ಜನಾರ್ದನ ರೆಡ್ಡಿ ನನ್ನ ಜೊತೆ ವೈಯಕ್ತಿಕ ಸಂಪರ್ಕದಲ್ಲಿಲ್ಲ – ಜಗದೀಶ್ ಶೆಟ್ಟರ್